ಕಾಡಾನೆ ದಾಳಿ: ಅಪಾರ ಪ್ರಮಾಣದ ಬೆಳೆ ನಷ್ಟ
ಕೊಟ್ಟಿಗೆಹಾರ: ಸಮೀಪದ ದೇವನಗುಲ್ ಗ್ರಾಮದಲ್ಲಿ ನೆನ್ನೆ ರಾತ್ರಿ ಕಾಡಾನೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ನಷ್ಟ ಮಾಡಿದ ಘಟನೆ ನಡೆದಿದೆ.
ದೇವನಗುಲಗ್ರಾಮದ ಸತೀಶ್ ಆಚಾರ್, ಬೆಳ್ಳಾಚಾರ್, ನಟೇಶ್ ಆಚಾರ್, ಮೊದಲಾದ ರೈತರ ತೋಟಗಳಿಗೆ ದಾಳಿ ನಡೆಸಿ ಕಾಫಿ ಏಲಕ್ಕಿ ಬಾಳೆ ಮೆಣಸು ಅಡಿಕೆ ಮೊದಲಾದ ಗಿಡಗಳನ್ನು ತುಳಿದು ನಷ್ಟ ಮಾಡಿವೆ.
ಶಾಶ್ವತ ಪರಿಹಾರಕ್ಕೆ ಒತ್ತಾಯ:
ಕೊಟ್ಟಿಗೆಹಾರ ಸುತ್ತಮುತ್ತ ಕಾಡಾನೆ ಹಾವಳಿ ನಿರಂತರವಾಗಿದ್ದು ಕಾಡಾನೆಗಳನ್ನು ಊರಿನತ್ತ ಮುಖ ಮಾಡಿದಂತೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಡಿನಲ್ಲಿ ಆನೆಗಳಿಗೆ ಆಹಾರದ ಕೊರತೆಯಾಗಿದ್ದು ಅರಣ್ಯ ಇಲಾಖೆ ಕಾಡುಗಳಲ್ಲಿ ಆನೆಗಳು ತಿನ್ನುವಂತಹ ಬಿದಿರು ಬಗುನೆ ಮೊದಲಾದ ಗಿಡಗಳನ್ನು ಬೆಳೆದಿದ್ದರೆ, ಆನೆಗಳು ಊರಿನತ್ತ ಮುಖ ಮಾಡುತ್ತಿರಲಿಲ್ಲ, ಅರಣ್ಯ ಇಲಾಖೆ ಪ್ರಾಣಿಗಳು ತಿನ್ನುವ ಗಿಡಗಳನ್ನು ಬೇರೆ ಗಿಡಗಳನ್ನು ನೆಡುತ್ತಿದ್ದಾರೆ. ಇದರಿಂದ ಪ್ರಾಣಿಗಳಿಗೆ ಆಹಾರದ ಕೊರತೆಯಾಗಿ ಊರಿನತ್ತ ಮುಖ ಮಾಡುತ್ತಿವೆ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: