ರಾತ್ರಿ 11 ಗಂಟೆ ನಂತರ ಮಕ್ಕಳು ಥಿಯೇಟರ್ ಗಳಲ್ಲಿ‌ ಸಿನಿಮಾ ನೋಡಲು ಬಿಡಬಾರದು: ಹೈಕೋರ್ಟ್ ಸೂಚನೆ - Mahanayaka
8:13 PM Monday 15 - September 2025

ರಾತ್ರಿ 11 ಗಂಟೆ ನಂತರ ಮಕ್ಕಳು ಥಿಯೇಟರ್ ಗಳಲ್ಲಿ‌ ಸಿನಿಮಾ ನೋಡಲು ಬಿಡಬಾರದು: ಹೈಕೋರ್ಟ್ ಸೂಚನೆ

28/01/2025

ರಾತ್ರಿ 11 ಗಂಟೆಯ ನಂತರ 16 ವರ್ಷದೊಳಗಿನ ಮಕ್ಕಳಿಗೆ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಚಲನಚಿತ್ರ ವೀಕ್ಷಿಸಲು ಅನುಮತಿ ನೀಡಬಾರದು ಎಂದು ರಾಜ್ಯ ಸರ್ಕಾರ ಮತ್ತು ಇತರರಿಗೆ ನಿರ್ದೇಶಿಸಿರುವ ತೆಲಂಗಾಣ ಹೈಕೋರ್ಟ್‌, ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಸೂಚಿಸಿದೆ.


Provided by

ಈ ಬಗ್ಗೆ ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ಸೂಚನೆ ನೀಡಬೇಕು ಎಂದು ಸರ್ಕಾರಕ್ಕೆ ಕೋರ್ಟ್‌ ನಿರ್ದೇಶಿಸಿದೆ.

‘ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರೆಗೂ 16 ವರ್ಷದೊಳಗಿನ ಮಕ್ಕಳಿಗೆ ರಾತ್ರಿ 11 ಗಂಟೆಯ ನಂತರ ಚಿತ್ರಮಂದಿರಗಳಲ್ಲಿ ಚಲನಚಿತ್ರ ವೀಕ್ಷಿಸಲು ಅನುಮತಿಸುವುದಿಲ್ಲ’ ಎಂದು ಹೇಳಿದೆ.

ನಟ ರಾಮ್‌ಚರಣ್‌ ನಟನೆಯ ‘ಗೇಮ್‌ ಚೇಂಜರ್’ ಸೇರಿದಂತೆ ಇತರ ಚಿತ್ರಗಳ ಟಿಕೆಟ್‌ ದರ ಹೆಚ್ಚಳಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಸೋಮವಾರದಿಂದ ನಡೆಸುತ್ತಿದೆ.

ಈ ವೇಳೆ ಅರ್ಜಿದಾರ ವಿಜಯ್‌ ಗೋಪಾಲ್ ಪರ ವಕೀಲರು, ಅಪ್ರಾಪ್ತ ವಯಸ್ಕರಿಗೆ ತಡರಾತ್ರಿ ಚಲನಚಿತ್ರ ವೀಕ್ಷಿಸಲು ಅನುಮತಿಸಬಾರದು. ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ನ್ಯಾಯಾಲಯದ ಗಮನ ಸೆಳೆದಿದ್ದರು.

ಮಲ್ಟಿಫ್ಲೆಕ್ಸ್‌ಗಳಲ್ಲಿ ಕೊನೆಯ ಪ್ರದರ್ಶನವು ಬೆಳಿಗ್ಗೆ 1.30ರ ವರೆಗೆ ನಡೆಯುತ್ತದೆ. ತಡರಾತ್ರಿ ಶೋಗಳಿಗೆ ಮಕ್ಕಳು ಪ್ರವೇಶಿಸದಂತೆ ನಿಯಂತ್ರಿಸುವ ಯಾವುದೇ ನಿಯಮಗಳಿಲ್ಲ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ