ಚೀನಾ ನೇತೃತ್ವದಲ್ಲಿ ಫೆಲೆಸ್ತೀನಿನ ಹಮಾಸ್ ಮತ್ತು ಫತಹ್ ನಾಯಕರ ನಡುವೆ ಮಾತುಕತೆ ಫಿಕ್ಸ್..?! - Mahanayaka
10:24 PM Thursday 23 - October 2025

ಚೀನಾ ನೇತೃತ್ವದಲ್ಲಿ ಫೆಲೆಸ್ತೀನಿನ ಹಮಾಸ್ ಮತ್ತು ಫತಹ್ ನಾಯಕರ ನಡುವೆ ಮಾತುಕತೆ ಫಿಕ್ಸ್..?!

18/07/2024

ಮಹತ್ವದ ಬೆಳವಣಿಗೆಯೊಂದರಲ್ಲಿ ಫೆಲೆಸ್ತೀನಿನ ಹಮಾಸ್ ಮತ್ತು ಫತಹ್ ನಾಯಕರ ನಡುವೆ ಮುಂದಿನ ವಾರ ಚೀನಾದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯಲಿದೆ. ಗಾಝಾದಲ್ಲಿ ಆಡಳಿತ ನಡೆಸುತ್ತಿರುವ ಹಮಾಸ್ ಮತ್ತು ಪಶ್ಚಿಮ ದಂಡೆಯಲ್ಲಿ ಆಡಳಿತ ನಡೆಸುತ್ತಿರುವ ಮೊಹಮ್ಮದ್ ಅಬ್ಬಾಸ್ ಅವರ ಫತಹ್ ಪಕ್ಷದ ನಡುವೆ ಸಂಬಂಧ ಗಟ್ಟಿಗೊಳಿಸುವ ಹಿನ್ನೆಲೆಯಲ್ಲಿ ಚೀನಾದ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಪ್ರಯತ್ನದ ಭಾಗವಾಗಿ ಇದನ್ನು ಪರಿಗಣಿಸಲಾಗಿದೆ.

ಈ ಕುರಿತಂತೆ ಅಮೆರಿಕಾದ ನ್ಯೂಯಾರ್ಕ್ ಟೈಮ್ಸ್ ಮತ್ತು ಇರಾನಿನ ಇರ್ ನಾ ಮಾಧ್ಯಮಗಳು ವರದಿ ಮಾಡಿವೆ.ಹೆಸರು ಬಹಿರಂಗಪಡಿಸಲು ಇಚ್ಛಿಸದ ಫೆಲಸ್ತೀನಿನ ಅಧಿಕಾರಿಗಳು ಈ ಸಭೆಯನ್ನು ದೃಢಪಡಿಸಿದ್ದಾರೆ.

ಈ ಎರಡು ಗುಂಪುಗಳು ಹಲವು ವರ್ಷಗಳಿಂದ ವಿರೋಧಿಗಳಾಗಿ ಗುರುತಿಸಿಕೊಂಡಿವೆ. ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ಇವು ಬೇರ್ಪಟ್ಟಿವೆ. ಐತಿಹಾಸಿಕವಾಗಿ ಚೀನಾ ಫೆಲೆಸ್ತೀನಿ ಪರವಿದೆ ಮತ್ತು ಫೆಲೆ ಸ್ತೀನ್ ಇಸ್ರೇಲ್ ಸಮಸ್ಯೆಗೆ ಎರಡು ರಾಷ್ಟ್ರಗಳ ಪರಿಹಾರವನ್ನು ಬೆಂಬಲಿಸುತ್ತಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ