5 ರಾಜ್ಯಗಳ ವಿಧಾನಸಭಾ ಚುನಾವಣೆಗೆ ವೀಕ್ಷಕರಾಗಿ ರಾಜ್ಯ ಕಾಂಗ್ರೆಸ್ ನಿಂದ ಮೂವರು ಹಿರಿಯ ನಾಯಕರ ಆಯ್ಕೆ - Mahanayaka
12:44 PM Saturday 30 - August 2025

5 ರಾಜ್ಯಗಳ ವಿಧಾನಸಭಾ ಚುನಾವಣೆಗೆ ವೀಕ್ಷಕರಾಗಿ ರಾಜ್ಯ ಕಾಂಗ್ರೆಸ್ ನಿಂದ ಮೂವರು ಹಿರಿಯ ನಾಯಕರ ಆಯ್ಕೆ

07/01/2021


Provided by

ಬೆಂಗಳೂರು: 2021ರಲ್ಲಿ ನಡೆಯಲಿರುವ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯವಿಧಾನಸಭಾ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸಲು ಕಾಂಗ್ರೆಸ್ ಚುನಾವಣೆ ವೀಕ್ಷಕರನ್ನು ನೇಮಿಸಿದ್ದು, ಕರ್ನಾಟಕದ ಮೂವರು ಹಿರಿಯ ರಾಜಕಾರಣಿಗಳನ್ನು ಚುನಾವಣಾ ವೀಕ್ಷಕರಾಗಿ ನೇಮಿಸಲಾಗಿದೆ.

ಬಿ.ಕೆ ಹರಿಪ್ರಸಾದ್, ಎಂ ವೀರಪ್ಪ ಮೋಯ್ಲಿ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಅವರಿಗೆ ಈ ಮೂರು ರಾಜ್ಯಗಳ ಚುನಾವಣೆಯ ಹೊಣೆ ನೀಡಲಾಗಿದೆ.  ವಿಧಾನಸಭಾ ಚುನಾವಣೆಗಳಿಗಾಗಿ ಆಯಾ ರಾಜ್ಯಗಳ ಚುನಾವಣಾ ಪ್ರಚಾರ ನಿರ್ವಹಣೆ ಮತ್ತು ಸಮನ್ವಯದ ಮೇಲ್ವಿಚಾರಣೆ ಮುಖಂಡರನ್ನು ನೇಮಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಆದೇಶ ಹೊರಡಿಸಿದ್ದಾರೆ.

 ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಹಿರಿಯ ಮುಖಂಡ ಲಿಜಿನ್ಹೊ ಫೆಲಿರೊ ಅವರನ್ನು ಕೇರಳದ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

ಅಸ್ಸಾಂಗೆ ಛತ್ತೀಸಗಡ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್‌ ವಾಸ್ನಿಕ್‌ ಹಾಗೂ ಹಿರಿಯ ಮುಖಂಡ ಶಕೀಲ್‌ ಅಹ್ಮದ್‌ ಖಾನ್‌ ಅವರಿಗೆ ವಹಿಸಲಾಗಿದೆ.

 ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೇಂದ್ರದ ಮಾಜಿ ಸಚಿವ ಎಂ.ಎಂ.ಪಲ್ಲಂ ರಾಜು, ಮಹಾರಾಷ್ಟ್ರ ಸಚಿವ ನಿತಿನ್‌ ರಾವುತ್‌ ಅವರನ್ನು ತಮಿಳುನಾಡು ಹಾಗೂ ಪುದುಚೇರಿ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

ಹಿರಿಯ ಮುಖಂಡರಾದ ಬಿ.ಕೆ.ಹರಿಪ್ರಸಾದ್‌, ಆಲಂಗೀರ್‌ ಆಲಂ, ವಿಜಯ ಇಂದರ್‌ ಸಿಂಗ್ಲಾ ಅವರು ಪಶ್ಚಿಮ ಬಂಗಾಳದ ವೀಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇತ್ತೀಚಿನ ಸುದ್ದಿ