ಚೂರಿಯಿಂದ ಬೆದರಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ! - Mahanayaka

ಚೂರಿಯಿಂದ ಬೆದರಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಅತ್ಯಾಚಾರ!

arrested
23/05/2021

ಬಿಹಾರ: ಉತ್ತರ ಪ್ರದೇಶದ ಬಳಿಕ ಬಿಹಾರ ಇದೀಗ ಆಗಾಗ ಅತ್ಯಾಚಾರದ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ಬಿಹಾರದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳನ್ನು ಬೆದರಿಸಿ ಅತ್ಯಾಚಾರ ನಡೆಸಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎರಡು ತಿಂಗಳ ಹಿಂದೆ ಆರೋಪಿಯು ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ಬಾಲಕಿ ಪ್ರತಿಭಟಿಸಿದ್ದು, ಈ ವೇಳೆ ಆರೋಪಿಯು ಚಾಕುವನ್ನು ಬಾಲಕಿಯ ಕುತ್ತಿಗೆಗೆ ಹಿಡಿದು ಬೆದರಿಸಿದ್ದು, ಇದರಿಂದಾಗಿ ಸಂತ್ರಸ್ತ ಬಾಲಕಿ ಅಸಹಾಯಕಳಾಗಿದ್ದಾಳೆ.

ಇತ್ತ ಬಾಲಕಿಗೆ ಮನೆಯಲ್ಲಿಯೂ ಅತ್ಯಾಚಾರ ನಡೆದ  ಬಗ್ಗೆ ಹೇಳಿಕೊಳ್ಳಲು ಧೈರ್ಯ ಸಾಕಾಗಿರಲಿಲ್ಲ. ಈ ನಡುವೆ ಬಾಲಕಿ ಗರ್ಭಿಣಿಯಾಗಿದ್ದು, ಆಕೆಯ ದೇಹದಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನಿಸಿ ಪೋಷಕರು ಪ್ರಶ್ನಿಸಿದಾಗ ಬಾಲಕಿ ನಡೆದ ಘಟನೆಯನ್ನು ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾಳೆ.

ಬಾಲಕಿಯ ಹೇಳಿಕೆಯಂತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ