ಮೂಡ ವಿಚಾರದಲ್ಲಿ ಸಿಎಂ ಪಾತ್ರ ಇಲ್ಲ, ಕಾನೂನು ಬದ್ಧವಾಗಿ ಪಡೆದಿದ್ದಾರೆ: ಸಚಿವ ಚೆಲುವರಾಯಸ್ವಾಮಿ - Mahanayaka

ಮೂಡ ವಿಚಾರದಲ್ಲಿ ಸಿಎಂ ಪಾತ್ರ ಇಲ್ಲ, ಕಾನೂನು ಬದ್ಧವಾಗಿ ಪಡೆದಿದ್ದಾರೆ: ಸಚಿವ ಚೆಲುವರಾಯಸ್ವಾಮಿ

chaluvaraya swamy
02/08/2024

ಮಂಡ್ಯ:  ಸಿಎಂ ವಿರುದ್ದ ಪ್ರಾಸಿಕ್ಯುಸನ್ ಗೆ ಅನುಮತಿ ನೀಡಿದ್ರೂ ಸರ್ಕಾರಕ್ಕೆ ಯಾಕೆ ತೊಂದರೆ ಆಗುತ್ತೆ?  ಮೂಡ ವಿಚಾರದಲ್ಲಿ ಸಿಎಂ ಪಾತ್ರ ಇಲ್ಲ, ಅವರು ಕಾನೂನು ಬದ್ದವಾಗಿಯೇ ಅವರು ನಿವೇಶನ ಪಡೆದುಕೊಂಡಿದ್ದಾರೆ. ಇದೆಲ್ಲಾ ನಡೆದಿರೋದು ಬಿಜೆಪಿ ಅವಧಿಯಲ್ಲಿ. ಹಾಗಾಗಿ ಅವರ ಮೇಲೆ ಕ್ರಮ‌ಕೈಗೊಳ್ಳಬೇಕು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.


Provided by

ರಾಜ್ಯದಲ್ಲಿ ರಾಜಕೀಯ ಬೆಳವಣಿಗೆ ವಿಚಾರಕ್ಕೆ ಸಂಬಂಧಿಸಿದಂತೆ ನಾಗಮಂಗಲದಲ್ಲಿ ಹೇಳಿಕೆ ನೀಡಿದ ಅವರು,  ಹಿಂದೆ ನಿರಾಣಿ ಹಾಗು  ಶಶಿಕಲ‌ ಜೊಲ್ಲೆ ವಿರುದ್ದವೂ ಪ್ರಾಸಿಕ್ಯೂಸನ್ ಅನುಮತಿ ಕೇಳಲಾಗಿತ್ತು. ಅವರಿಗೆ ಇಲ್ಲದೆ ಇರೋದು ಸಿದ್ದರಾಮಯ್ಯಗೆ ಕೊಡ್ತಿರೋದು ರಾಜಕೀಯ ಪ್ರೇರಿತ. ಸಿಎಂ ಸಿದ್ದರಾಮಯ್ಯ ಅವರ ಬದಲಾವಣೆಯೂ ಇಲ್ಲ. ಅವರ ಸ್ಥಾನಕ್ಕೆ‌ ಕುತ್ತು ಇಲ್ಲ ಎಂದು ಅವರು ಹೇಳಿದರು.

ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವಧಿಯಲ್ಲಿನ ಹಗರಣಗಳ ಬಗೆಗೆ ನಾವು ಪ್ರಶ್ನೆ ಮಾಡ್ತಿವಿ. ಪಾದಯಾತ್ರೆಗೆ ಜೆಡಿಎಸ್ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಜೊತೆಗೆ ಇದ್ದಾಗ ಬೆಂಬಲ ಕೊಡಬೇಕಲ್ವಾ, ಬೆಂಬಲ ಕೊಡದಿದ್ದರೆ ತೆಗಿತಾರೆ ಎಂಬ ಕಾರಣಕ್ಕೆ‌ ಜೆಡಿಎಸ್ ನವರ ಬೆಂಬಲ ಕೊಟ್ಟಿದ್ದಾರೆ ಎಂದರು.

ಯಾವುದೇ ಸಮಸ್ಯೆ ಬಂದರೂ ಎದುರಿಸಬೇಕು, ಜೊತೆಗೆ ಕರ್ತವ್ಯವನ್ನ ನಿಭಾಯಿಸಬೇಕು. ರೈತರಿಗೆ ಬಿತ್ತನೆ ಬೀಜ ವಿತರಣೆ ಮಾಡೋ ಕೆಲಸ ನಡೆಯುತ್ತಿದೆ, ಕತ್ತರ ಘಟ್ಟ ಗ್ರಾಮಕ್ಕೆ ತೆರಳಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವುದಾಗಿ ಇದೇ ವೇಳೆ ಅವರು ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ