ನಿಮ್ಮಜ್ಜ ಪ್ರಧಾನಿಯಾಗಿದ್ದು, ನಿಮ್ಮಪ್ಪ ಸಿಎಂ ಆಗಿದ್ದು ಮುಸ್ಲಿಮರ ಮತದಿಂದ: ನಿಖಿಲ್ ಗೆ ಬೆವರಿಳಿಸಿದ ಸಿಎಂ ಇಬ್ರಾಹಿಂ!
ಬೆಂಗಳೂರು: ನಿಮ್ಮಜ್ಜನಿಗೆ ಅಲ್ಪಸಂಖ್ಯಾತರು ಮತ ಕೊಟ್ಟಿದ್ದಕ್ಕೆ ಸಿಎಂ ಆಗಿದ್ದು, ನಿಮ್ಮ ತಾತ ಪ್ರಧಾನಿಯಾಗಲು ಅಲ್ಪಸಂಖ್ಯಾತರ ಕೊಡುಗೆ ಇದೆ ಎಂದು ನಿಖಿಲ್ ಕುಮಾರಸ್ವಾಮಿ ವಿರುದ್ಧ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.
ಮುಸ್ಲಿಮ್ ಸಮುದಾಯದ ಮತಗಳಿಂದ ತನಗೆ ಸೋಲಾಯ್ತು ಎಂದು ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆ ಸೋಲಿನ ಬಗ್ಗೆ ನೀಡಿರುವ ಹೇಳಿಕೆಗೆ ಬೆಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಿಎಂ ಇಬ್ರಾಹಿಂ, ಪ್ರತಿಕ್ರಿಯೆ ನೀಡಿದರು.
ಅಪ್ಪಾ ನಿಖಿಲಾ, ಎಷ್ಟಿದ್ದಾರಪ್ಪ ಅಲ್ಪಸಂಖ್ಯಾತರು? ರಾಮನಗರದಲ್ಲಿ ನಿಮ್ಮಜ್ಜನಿಗೆ ಅಲ್ಪಸಂಖ್ಯಾತರು ಮತ ಕೊಟ್ಟಿದ್ದಕ್ಕೆ ಸಿಎಂ ಆಗಿದ್ದು. ಪ್ರಧಾನಿಯಾಗಿದ್ದಾಗಲು ಅಲ್ಪಸಂಖ್ಯಾತರ ಕೊಡುಗೆ ಇದೆ. ಅಷ್ಟೇ ಅಲ್ಲ ನಿಮ್ಮಪ್ಪ ಸಾಬ್ರ ಮತಗಳಿಂದಲೇ ಗೆದ್ದಿದ್ದು ಎಂದು ಇಬ್ರಾಹಿಂ ತಿರುಗೇಟು ನೀಡಿದರು.
ನನ್ನನ್ನು ಅಧ್ಯಕ್ಷ ಸ್ಥಾನದಿಂದ ತೆಗೆದಾಗಲೇ ನಾನು ಹೇಳಿದ್ದೆ, ಚನ್ನಪಟ್ಟಣ ಚುನಾವಣೆನ ನನ್ನ ಬಿಟ್ಟು ನಡೆಸಿ ಎಂದಿದ್ದೆ. ನಾನಿದ್ದಾಗ ಕುಮಾರಸ್ವಾಮಿ 25 ಸಾವಿರ ಮತಗಳಿಂದ ಗೆಲ್ಲಿಸಿದ್ರು, ಈಗ ನಿಖಿಲ್ ಕುಮಾರಸ್ವಾಮಿಯನ್ನು 20 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಚನ್ನಪಟ್ಟಣದಲ್ಲಿ ಮುಸ್ಲಿಮರು ವೋಟು ಕೊಟ್ಟಾಗ ನಿಮ್ಮಜ್ಜ ಸಿಎಂ ಆದ್ರು, 16 ಜನ ಸಂಸದರಾದಾಗ ಪಿಎಂ ಆದ್ರು. ಆಗ ನೀನು ಇನ್ನೂ ಹುಟ್ಟಿರಲಿಲ್ಲ, ಬೆಳೆಯೋ ಹುಡುಗ ನೀನು. ಸುದ್ದಿಗೋಷ್ಠಿ ನೋಡಿ ಅಯ್ಯೋ ಅನಿಸಿತು, ಚಿಕ್ಕವಯಸ್ಸಿಗೆ ಹೀಗೆ ಆಗಬಾರದಿತ್ತು ಎಂದು ಸಿಎಂ ಇಬ್ರಾಹಿಂ ಚುಚ್ಚಿದರು.
ನಿಮ್ಮಜ್ಜ, ನಿಮ್ಮಪ್ಪನ ಅಮಿತ್ ಶಾ ಹತ್ತಿರ ಕರೆದುಕೊಂಡು ಹೋಗಿದ್ದು ನೀನೆ ಅಲ್ವೇನಪ್ಪಾ? ನಾನು ಅಧ್ಯಕ್ಷ ಇದ್ದಾಗ ನನಗೆ ಹೇಳದೇ ಹೋದ್ರಿ. ಈಗಲೂ ನಾನೇ ಅಧ್ಯಕ್ಷ ಇದ್ದೀನಿ. ಯೋಗೇಶ್ವರ್ ಲೊಕಲ್ ಅಭ್ಯರ್ಥಿ. ಆತನು ಒಕ್ಕಲಿಗ ಜನಾಂಗದವರಾಗಿದ್ದಾರೆ. ನಿನಗೆ ಇರೋ ಬಂಡವಾಳ ನಿಮ್ಮಜ್ಜ. ನಿಮ್ಮಜ್ಜನವರಿಗೆ ಇದ್ದಿದ್ದು ಸಿದ್ದಾಂತ ಅದನ್ನ ಬಲಿಕೊಡಿಸಿದ್ರಿ. ಅಹಿಂದ ದಲಿತ ಮತ ಇಲ್ವಾ ? ನಿಮ್ಮ ದೌರ್ಬಲ್ಯ ಮುಚ್ಚಿಕೊಳ್ಳೊಕೆ ಯಾಕೆ ಮುಸ್ಲಿಮರ ಮೇಲೆ ಅಪಾದನೆ ಮಾಡುತ್ತೀರಾ ಎಂದು ಸಿಎಂ ಇಬ್ರಾಹಿಂ ತರಾಟೆಗೆತ್ತಿಕೊಂಡಿದ್ದಾರೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: