ಗುಜರಾತ್ ನಲ್ಲಿ ನಡೀತು ಕೋಮುಗಲಭೆ: ಓರ್ವ ಸಾವು - Mahanayaka

ಗುಜರಾತ್ ನಲ್ಲಿ ನಡೀತು ಕೋಮುಗಲಭೆ: ಓರ್ವ ಸಾವು

15/02/2024

ಗುಜರಾತ್ ನ ಸಬರ್ ಕಾಂತ ಜಿಲ್ಲೆಯ ಪ್ರಾಂತಿಜ್ ಪಟ್ಟಣದಲ್ಲಿ ಎರಡು ಸಮುದಾಯಗಳ ಸದಸ್ಯರ ನಡುವಿನ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಖೋಡಿಯಾರ್ ಕುವಾ ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಮಯೂರ್ ಭೋಯ್ ಮತ್ತು ಇಮ್ರಾನ್ ಕದ್ರಿ ಎಂಬ ಇಬ್ಬರು ವ್ಯಕ್ತಿಗಳ ನಡುವೆ ವಾಗ್ವಾದ ನಡೆದ ನಂತರ ಗಲಾಟೆ ಪ್ರಾರಂಭವಾಯಿತು. ಈ ಮಧ್ಯೆ ಎರಡೂ ಸಮುದಾಯಗಳ ಸದಸ್ಯರು ಪರಸ್ಪರ ಹಲ್ಲೆ ನಡೆಸಿದರು.

ಇದರ ಪರಿಣಾಮವಾಗಿ ರಾಜು ಭೋಯ್ ಎಂಬವರು ಗಾಯಗೊಂಡರು” ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.
ರಾಜು ಭೋಯ್ ಅವರ ಪುತ್ರ ಬಿಪಿನ್ ನೀಡಿದ ತಮ್ಮ ದೂರಿನಲ್ಲಿ, ರಾಜು ಭೋಯ್ ಅವರನ್ನು ಗುಂಪೊಂದು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ನಂತರ ಲೋಹದ ಪೈಪ್ ನಿಂದ ಹೊಡೆದು ಕೊಂದಿದೆ ಎಂದು ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ