ನನಗೇನಾದ್ರು ಸಿಕ್ರೆ ಕಾಲಲ್ಲಿರೋದು ತೆಗೆದು ಹೊಡೆತಿದ್ದೆ: ಚುನಾವಣೆ ವೇಳೆ ಸಿಲಿಂಡರ್‌ ಬೆಲೆ ಇಳಿಕೆಗೆ ಕಾಂಗ್ರೆಸ್‌ ಮುಖಂಡ ಕಿಡಿ - Mahanayaka

ನನಗೇನಾದ್ರು ಸಿಕ್ರೆ ಕಾಲಲ್ಲಿರೋದು ತೆಗೆದು ಹೊಡೆತಿದ್ದೆ: ಚುನಾವಣೆ ವೇಳೆ ಸಿಲಿಂಡರ್‌ ಬೆಲೆ ಇಳಿಕೆಗೆ ಕಾಂಗ್ರೆಸ್‌ ಮುಖಂಡ ಕಿಡಿ

gs manjunath
11/03/2024


Provided by

ಚಿತ್ರದುರ್ಗ: ಚುನಾವಣೆ ಸಂದರ್ಭದಲ್ಲಿ ಸಿಲಿಂಡರ್‌ ದರ 100 ರೂಪಾಯಿ ಇಳಿಸಿದ್ದಾರೆ. ನನಗೇನಾದರೂ ಸಿಕ್ಕರೆ ಕಾಲಿನಲ್ಲಿರೋದು ತೆಗೆದು ಹೊಡೆಯುತ್ತಿದ್ದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಖಂಡ ಜಿ.ಎಸ್.ಮಂಜುನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರಿಯೂರಿನ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಮಾತನ್ನು ನಾನು ಕಾಂಗ್ರೆಸಿಗನಾಗಿ ಹೇಳುತ್ತಿಲ್ಲ, ದೇಶದ ಸಾಮಾನ್ಯ ಪ್ರಜೆಯಾಗಿ ಹೇಳುತ್ತಿದ್ದೇನೆ ಎಂದರು.

ನೀವೆಲ್ಲರೂ  ಪ್ರಶ್ನೆ ಮಾಡುವುದನ್ನು ಕಲಿಯಬೇಕು, ಪ್ರಶ್ನೆ ಮಾಡುವುದನ್ನು ಕಲಿಯದಿದ್ದರೆ, ಮತ ಹಾಕಲು ಅರ್ಹರಲ್ಲ ಎಂದು ಅವರು ಮತದಾರರಿಗೆ ಕಿವಿಮಾತು ಹೇಳಿದರು.

ಚುನಾವಣೆ ಆರಂಭವಾಗಲು 15—20 ದಿನಗಳಿರುವಾಗ ಈಗ ಸಿಲಿಂಡರ್‌ ದರ 100ಕ್ಕೆ ಇಳಿಸಿದ್ದಾರೆ. ಇದನ್ನು ನೋಡಿ ನಮ್ಮ ಜನ ಖುಷಿ ಪಡುತ್ತಿದ್ದಾರೆ ಎಂದು ಅವರು ವ್ಯಂಗ್ಯ ಮಾಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ