ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸಂವಿಧಾನ ಸಮರ್ಪಣಾ ದಿನ ಆಚರಣೆ

26/11/2023
ಮಂಗಳೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ. (ಪ್ರೊಫೆಸರ್ ಕೃಷ್ಣಪ್ಪ ಸ್ಥಾಪಿತ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಇಂದು ಸಂವಿಧಾನ ಸಮರ್ಪಣಾ ದಿನವನ್ನು ಸಂಘಟನೆಯ ಜಿಲ್ಲಾ ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು.
ಜಿಲ್ಲಾ ಸಂಚಾಲಕರಾದ ರಘು ಕೆ. ಎಕ್ಕಾರ್. ಜಿಲ್ಲಾ ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ , ಪದಾಧಿಕಾರಿಗಳಾದ ಲಕ್ಷ್ಮಣ್ ಕಾಂಚನ್, ರಾಕೇಶ್ ಕುಂದರ್, ಕಲಾವತಿ ಕೋಟೆಕಾರ್, ರಾಜಯ್ಯ ಮಂಗಳೂರು ಹಾಗೂ ಕಮಲಾಕ್ಷ ಬಜಾಲ್ , ಜಯಕುಮಾರ್ ಹಾದಿಗೆ ಇತರರು ಭಾಗವಹಿಸಿದ್ದರು.