ಗಂಗಾವತಿ: ಕರವೇ ವತಿಯಿಂದ ಸಂವಿಧಾನ ಸಮರ್ಪಣೆ ದಿನ ಆಚರಣೆ - Mahanayaka

ಗಂಗಾವತಿ: ಕರವೇ ವತಿಯಿಂದ ಸಂವಿಧಾನ ಸಮರ್ಪಣೆ ದಿನ ಆಚರಣೆ

Constitution day
26/11/2022

ಗಂಗಾವತಿ: ನಗರದ ಕೋರ್ಟ್ ಮುಂಭಾಗ ಇರುವ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಂವಿಧಾನ ವಿಧಿಯನ್ನು ಓದುವ ಮೂಲಕ ಸಂವಿಧಾನ ಸಮರ್ಪಣೆ ದಿನವನ್ನು ಕರ್ನಾಟಕ ರಕ್ಷಣಾ ವೇದಿಕೆ ಆಚರಿಸಿತು.

ಈ ಸಂದರ್ಭದಲ್ಲಿ ಯಮನೂರಪ್ಪ ಕರವೇ ಅಧ್ಯಕ್ಷರು ಮಾತನಾಡಿ, ವಿಶ್ವಜ್ಞಾನಿ ವಿಶ್ವ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಈ ಸಂವಿಧಾನದಲ್ಲಿ  ಎಲ್ಲಾ ಜಾತಿ,   ಜನಾಂಗದವರಿಗೆ ಸಮಾನತೆ ಹಕ್ಕು ಮತ್ತು  ಹೆಣ್ಣು ಮಕ್ಕಳ ಪರವಾಗಿ, ನಿರ್ಗತಿಕರ ಪರವಾಗಿ, ಕೂಲಿ ಕಾರ್ಮಿಕರು ಶೋಷಿತ ಸಮುದಾಯಗಳು ಪರವಾಗಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ನೀಡಲಾಗಿದೆ ಎಂದರು.

ಜನರು ನೆಮ್ಮದಿಯ ಜೀವನ ಸಾಗಿಸಲು ಅಂಬೇಡ್ಕರ್ ಅವರು ಸಂವಿಧಾನವನ್ನು ನೀಡಿದ್ದಾರೆ. ಆದರೆ ಕೆಲವು ಮನುವಾದಿ ಮನಸ್ಥಿತಿಗಳು, ಇಂದಿಗೂ ಕೆಲವೊಂದು ಹಳ್ಳಿಗಳಲ್ಲಿ ಅಸ್ಪೃಶ್ಯತೆ ಆಚರಿಸುತ್ತಿದ್ದು, ಇದರಿಂದಾಗಿ ಅಸಮಾನತೆ ಹೋಗದೇ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗಿದೆ. ಇದನ್ನು ನಾವು ಬದಲಾವಣೆ ಮಾಡೋಣ, ಬದಲಾವಣೆಯಾಗದಿದ್ದರೆ ತಕ್ಕ ಪಾಠ ಕಲಿಸಬೇಕು ಎಂದರು.

ಈ ಸಂದರ್ಭದಲ್ಲಿ  ಡಿಎಸ್ಎಸ್  ಜಿಲ್ಲಾಧ್ಯಕ್ಷರಾದ ಸಿ.ಕೆ.ಮರಿ ಸ್ವಾಮಿ ಬರಗೂರು ,  ಶಂಭುನಾಥ,   ಹಿರಿಯ ಮುಖಂಡರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕ ಉಪಾಧ್ಯಕ್ಷರಾದ ಶರಣಪ್ಪ ಭಜಂತ್ರಿ, ಪದಾಧಿಕಾರಿಗಳಾದ  ಹುಲಿಗೇಶ್ ಕೊಜ್ಜಿ,  ಪವನ್ ಕುಮಾರ್,  ಹನುಮೇಶ್, ಹನುಮಂತ ಬಜಂತ್ರಿ,  ಬಸವರಾಜ ಭಜಂತ್ರಿ, ಲಕ್ಷ್ಮಣ್ ಸಿಂಗ್ ಅನೇಕ ಮುಖಂಡರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ