ಕೊರೊನಾ ಗೆದ್ದ ತಾಯಿಯನ್ನು ಮನೆಗೆ ಸೇರಿಸದ ಪುತ್ರ | ನೊಂದ ತಾಯಿ ಆತ್ಮಹತ್ಯೆ - Mahanayaka
8:24 PM Thursday 14 - November 2024

ಕೊರೊನಾ ಗೆದ್ದ ತಾಯಿಯನ್ನು ಮನೆಗೆ ಸೇರಿಸದ ಪುತ್ರ | ನೊಂದ ತಾಯಿ ಆತ್ಮಹತ್ಯೆ

haveri
13/05/2021

ಹಾವೇರಿ: ಸಾಂಕ್ರಾಮಿಕ ರೋಗ ಕೊರೊನಾವನ್ನು ಗೆದ್ದು ಬಂದ ಆ ತಾಯಿ,  ತನ್ನ ಮಗನ ಮುಂದೆ ಸೋತಿದ್ದಳು. ಕೊರೊನಾವನ್ನು ಗೆದ್ದ ಖುಷಿಯಲ್ಲಿ ಮನೆಗೆ ಬಂದಿದ್ದ ತಾಯಿಯನ್ನು ಮನೆಗೆ ಸೇರಿದ ಮಗನ ವರ್ತನೆಯಿಂದ ತೀವ್ರವಾಗಿ ನೊಂದ 80 ವರ್ಷದ ತಾಯಿ ಸಾವಿಗೆ ಶರಣಾಗಿದ್ದಾರೆ.

ಹಾವೇರಿಯ ದೇವಿಹೊಸುರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 80 ವರ್ಷದ ಅಡಿವೆಕ್ಕ ಕಬ್ಬೂರು ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ.  ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಗುಣಮುಖರಾಗಿದ್ದರು.

ಗುಣಮುಖರಾದ ಖುಷಿಯಲ್ಲಿ ಮನೆಗೆ ಬಂದ ತಾಯಿಯನ್ನು ಕಂಡ ಮಗ ಮತ್ತು ಸೊಸೆ, ನಿನಗೆ ಕೊರೊನಾ ಇದೆ. ಮನೆ ಒಳಗೆ ಬರಬೇಡ ಎಂದು ನಿಂದಿಸಿದ್ದಾರೆ. ಇದರಿಂದ ತೀವ್ರವಾಗಿ ನೊಂದ ತಾಯಿ ಗ್ರಾಮದ ಹೊರವಲಯದಲ್ಲಿರುವ ಕೆರೆಗೆ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ತಾಯಿಯನ್ನು ನಿಂದಿಸಿ ಕಳುಹಿಸಿದ್ದ ಪುತ್ರ, ಮನೆಯ ಹೊರಗೆ ತಾಯಿ ಕಾಣದೇ ಇದ್ದಾಗ ಊರಿಡೀ ಹುಡುಕಾಟ ನಡೆಸಿದ್ದಾನೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾನೆ. ಇದೇ ಸಂದರ್ಭದಲ್ಲಿ ಕೆರೆಯಲ್ಲಿ ವೃದ್ಧೆಯ ಮೃತದೇಹವನ್ನು ಇಲ್ಲಿನ ಸ್ಥಳೀಯ ಮೀನುಗಾರರು ಗಮನಿಸಿ, ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಇನ್ನೂ ವೃದ್ಧೆಯ ಕಿರಿಯ ಪುತ್ರಿ, “ನನ್ನ ತಾಯಿಯ ಸಾವಿಗೆ  ಅಣ್ಣ ಮತ್ತು ಅತ್ತಿಗೆಯೇ ಕಾರಣ ಎಂದು ಆರೋಪಿಸಿದ್ದಾಳೆ.




ಇತ್ತೀಚಿನ ಸುದ್ದಿ