‘ಕೊರೊನಾಕ್ಕಿಂತ ಬಿಜೆಪಿ ಅಪಾಯಕಾರಿ’ ಎಂದ ಯುವ ಸಂಸದೆ ವಿರುದ್ಧ ಬಿಜೆಪಿ ಕಿಡಿ - Mahanayaka
10:25 PM Thursday 16 - October 2025

‘ಕೊರೊನಾಕ್ಕಿಂತ ಬಿಜೆಪಿ ಅಪಾಯಕಾರಿ’ ಎಂದ ಯುವ ಸಂಸದೆ ವಿರುದ್ಧ ಬಿಜೆಪಿ ಕಿಡಿ

15/01/2021

ಕೋಲ್ಕತ್ತಾ:  ಬಿಜೆಪಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ  ಬಿಜೆಪಿ ನಾಯಕರು ತೃಣಮೂಲ ಕಾಂಗ್ರೆಸ್ ನ ಯುವ ಸಂಸದೆ ನುಸ್ರತ್ ಜಹಾನ್ ವಿರುದ್ಧ ಕಿಡಿಕಾರಿದ್ದಾರೆ.


Provided by

ರಕ್ತದಾನ ಶಿಬಿರವೊಂದರಲ್ಲಿ ಭಾಗವಹಿಸಿದ್ದ ನುಸ್ರತ್ ಜಹಾನ್, ನಿಮ್ಮ ಕಿವಿ ಹಾಗೂ ಕಣ್ಣುಗಳನ್ನು ಯಾವಾಗಲು ಎಚ್ಚರದಿಂದ ತೆರೆದಿಟ್ಟಿರಿ. ಯಾಕೆಂದರೆ, ನಿಮ್ಮ ಸುತ್ತ ಮುತ್ತ ಕೊರೊನಾಕ್ಕಿಂತಲೂ ಅಪಾಯಕಾರಿ ಮನುಷ್ಯರಿದ್ದಾರೆ. ಕೊರೊನಾಕ್ಕಿಂತಲೂ ಅಪಾಯಕಾರಿ ಬಿಜೆಪಿ ಎಂದು ಅವರು ಹೇಳಿಕೆ ನೀಡಿದ್ದರು.

ಬಿಜೆಪಿಗೆ ಸಂಸ್ಕೃತಿ ಗೊತ್ತಿಲ್ಲ, ಮಾನವೀಯತೆ ಗೊತ್ತಿಲ್ಲ,  ಪರಿಶ್ರಮದ ಅರ್ಥ ತಿಳಿದಿಲ್ಲ. ಅವರಿಗೆ ವ್ಯವಹಾರ ಮಾತ್ರವೇ ತಿಳಿದಿದೆ.  ಹಾಗಾಗಿ ಅವರ ಬಳಿ ಸಾಕಷ್ಟು ಹಣ ಇದೆ. ಧರ್ಮದ ಆಧಾರದಲ್ಲಿ ಜನರ ನಡುವೆ ಅವರು ಸಂಘರ್ಷ ನಡೆಸುತ್ತಿದ್ದಾರೆ ಎಂದು ನುಸ್ರತ್ ಜಹಾನ್ ಹೇಳಿದ್ದರು.

ಈ ಹೇಳಿಕೆಯನ್ನು ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಅಮಿತ್ ಮಾಲ್ವಿಯ ಅವರು ಮಮತಾ ಬ್ಯಾನರ್ಜಿ ವಿರುದ್ಧ ಕಿಡಿಕಾರಿದ್ದಾರೆ. ನುಸ್ರತ್ ಅವರು ಬಿಜೆಪಿಯನ್ನು ಕೊರೊನಾಕ್ಕೆ ಹೋಲಿಸಿದ್ದಾರೆ. ಆದರೆ ಮಮತಾ ಬ್ಯಾನರ್ಜಿ ಸುಮ್ಮನಿದ್ದಾರೆ. ಮಮತಾ ಅವರು ಲಸಿಕೆಯ ರಾಜಕಾರಣ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ