ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು ಬರ್ಬರ ಹತ್ಯೆ - Mahanayaka
10:48 AM Friday 14 - February 2025

ಕೋರ್ಟ್ ಆವರಣದಲ್ಲೇ ಪತ್ನಿಯ ಕತ್ತು ಕೊಯ್ದು ಬರ್ಬರ ಹತ್ಯೆ

hasana
13/08/2022

ಹಾಸನ: ಕೋರ್ಟ್ ಆವರಣದಲ್ಲೇ ಪತಿಯೋರ್ವ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರದ ಕೋರ್ಟ್ ಆವರಣದಲ್ಲಿ ನಡೆದಿದೆ.

ತಟ್ಟೆಕೆರೆ ಗ್ರಾಮದ ನಿವಾಸಿ ಚೈತ್ರಾ ಹತ್ಯೆಗೀಡಾದ ಮಹಿಳೆಯಾಗಿದ್ದು, ಪತಿ ಶಿವಕುಮಾರ್ ಎಂಬಾತ ಹತ್ಯೆ ಆರೋಪಿಯಾಗಿದ್ದಾನೆ. ಕೃತ್ಯದ ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಚೈತ್ರಾ ಹಾಗೂ ಶಿವಕುಮಾರ್ 7 ವರ್ಷಗಳ ಹಿಂದೆ ಮದುವೆಯಾಗಿದ್ದರು. ಪತಿ ಹಾಗೂ ಪತ್ನಿಯ ನಡುವೆ ಹೊಂದಾಣಿಕೆ ಇಲ್ಲದಿದುದ್ದರಿಂದ ವಿಚ್ಛೇದನಕ್ಕಾಗಿ ಕೋರ್ಟ್ ಗೆ ಹೋಗಿದ್ದರು.

ಸಿವಿಲ್‌ನ್ಯಾಯಲಯದಲ್ಲಿ ರಾಜಿ ಸಂಧಾನ ಮಾತುಕತೆಗಾಗಿ ಬಂದು ಲೋಕ್ ಅದಾಲತ್ ನಲ್ಲಿ ಪತ್ನಿ ಜೊತೆ ಚನ್ನಾಗಿ ಇರುತ್ತೇನೆಂದು ಪತಿ ಶಿವಕುಮಾರ್ ಹೇಳಿಕೆ ಕೊಟ್ಟಿದ್ದ. ಮಕ್ಕಳಿಬ್ಬರ ಸಲುವಾಗಿ ಹೊಂದಾಣಿಕೆ ಜೀವನ ನಡೆಸುವಂತೆ ವಕೀಲರು ಹಾಗೂ ನ್ಯಾಯಾಧೀಶರು ಸಲಹೆ ಕೊಟ್ಟಿದ್ದರು. ಸಂಧಾನಕ್ಕೆ ಒಪ್ಪಿ ಹೊರ ಬಂದ ಶಿವಕುಮಾರ್  ಶೌಚಾಲಯದಲ್ಲಿ ಪತ್ನಿಯ ಕತ್ತುಕೊಯ್ದಿದ್ದಾನೆ. ಈ ವೇಳೆ ಹೊಳೆನರಸೀಪುರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಅಂಬ್ಯುಲೆನ್ಸ್‌ನಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಆಸ್ಪತ್ರೆಗೆ ತಲುಪಿದ ವೇಳೆ ಅವರು ಸಾವನ್ನಪ್ಪಿದ್ದಾರೆ.

ಪತ್ನಿಯನ್ನು ಕೊಂದ ಬಳಿಕ ಮಗುವನ್ನೂ ಕೊಲೆ ಮಾಡಲು ಆರೋಪಿ ಯತ್ನಿಸಿದ್ದು, ಈ ವೇಳೆ ಸಾರ್ವಜನಿಕರು ಮಗುವನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವ್ಯಕ್ತಿಯ ಕ್ರೂರತೆ ಕಂಡು ಜನರು ಬೆಚ್ಚಿಬಿದ್ದಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ