ದನ ಇದ್ದಂಗಿದ್ದಾನೆ, ಹೈವಾನ: ನಟ ದರ್ಶನ್ ಬಗ್ಗೆ ಅಜಿತ್ ಹನುಮಕ್ಕನವರ್ ಹೇಳಿಕೆಗೆ ವ್ಯಾಪಕ ಆಕ್ರೋಶ

ನಟ ದರ್ಶನ್ ಅವರ ಬಗ್ಗೆ ನ್ಯೂಸ್ ಆ್ಯಂಕರ್ ಅಜಿತ್ ಹನುಮಕ್ಕನವರ್ ನ್ಯೂಸ್ ಹೆಸರಿನಲ್ಲಿ ನಡೆಸಿದ ವೈಯಕ್ತಿಕ ದಾಳಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿದೆ ಎನ್ನುವ ವಿಚಾರದಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ತರಾಟೆಗೆತ್ತಿಕೊಳ್ಳಬೇಕಾಗಿದ್ದ ಅಜಿತ್ ಹನುಮಕ್ಕನವರ್ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಅವರನ್ನು ವೈಯಕ್ತಿವಾಗಿ ಟಾರ್ಗೆಟ್ ಮಾಡಿರುವುದು ಕಂಡು ಬಂತು.
ಜೈಲಿನಲ್ಲಿ ನಟ ದರ್ಶನ್ ಸೊರಗಿ ಹೋಗಿದ್ದಾರೆ ಅಂತ ಹೇಳ್ತಾ ಇದ್ರು. ಝೂಮ್ ಮಾಡಿ ನೋಡಿದ್ರೆ ಒಳ್ಳೆ ದನ ಇದ್ದಂಗೆ ಇದ್ದಾನೆ. ಹೈವಾನ ಎಂದು ನ್ಯೂಸ್ ಆ್ಯಂಕರ್ ಅಜಿತ್ ಹನುಮಕ್ಕನವರ್ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ಸಾಕಷ್ಟು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೆ ಎಲ್ಲವೂ ಓಕೆ ಆದ್ರೆ ಇದು ಸ್ವಲ್ಪ ಅಲ್ಲ, ತುಂಬಾನೇ ಅತಿಯಾಯ್ತು ಅಂತ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ದರ್ಶನ್ ಕೊಲೆ ಆರೋಪಿ ಅಷ್ಟೆ. ಅಪರಾಧಿ ಅಲ್ಲ. ಕೋರ್ಟ್ ಈ ಪ್ರಕರಣದ ಬಗ್ಗೆ ಇನ್ನೂ ಯಾವುದೇ ತೀರ್ಪು ನೀಡಿಲ್ಲ. ಅದಕ್ಕೂ ಮೊದಲೇ ನ್ಯೂಸ್ ಆ್ಯಂಕರ್ ಗಳು ಆತ ಅಪರಾಧಿ ಅನ್ನೋ ಮಟ್ಟಕ್ಕೆ ಅವಮಾನಿಸುತ್ತಿರುವುದು ಯಾಕೆ ಅನ್ನೋ ಪ್ರಶ್ನೆ ಕೇಳಿ ಬಂದಿದೆ.
ನಟ ದರ್ಶನ್ ಕಾಟೇರಾ ಚಿತ್ರ ಮಾಡಿದ ನಂತರ ಕೆಲವರ ಕೆಂಗಣ್ಣಿಗೆ ಕಾರಣವಾಗಿದ್ದಾರೆ. ಕಾಟೇರದಲ್ಲಿ ಜಾತಿ ಅಸಮಾನತೆಯ ವಿರುದ್ಧ ಮಾತನಾಡಿದ್ದಕ್ಕೆ ಕೆಲವರು ಈಗ ದರ್ಶನ್ ಮೇಲೆ ದ್ವೇಷಕಾರುತ್ತಿದ್ದಾರೆ ಅಂತ ಹೇಳಲಾಗುತ್ತಿದೆ.
ಈ ಹಿಂದೆ ನಟ ದರ್ಶನ್ ಅವರನ್ನು ಮಾಧ್ಯಮಗಳು ನಿರ್ಬಂಧಿಸಿದ್ದವು. ಅವರ ಬಗ್ಗೆ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡಿರಲಿಲ್ಲ. ನಟ ದರ್ಶನ್ ಗೆ ಕೆಲವು ಮಾಧ್ಯಮಗಳ ಸಿಬ್ಬಂದಿ ಅನಗತ್ಯವಾಗಿ ಟಾರ್ಚರ್ ನೀಡಿದ್ದರಿಂದ ಆಕ್ರೋಶಗೊಂಡಿದ್ದ ದರ್ಶನ್, “ಏನ್ರಿ ಮೀಡಿಯಾ… ನನ್ನ *** ಸಮಾನ” ಅಂದಿದ್ರು. ಅಂದು ದರ್ಶನ್ ಆ ಮಾತು ಆಡಬಾರದಿತ್ತು ಅಂತ ನಾವು ಅಂದು ಕೊಂಡಿದ್ವಿ ಆದ್ರೆ, ಈಗ ಅವರು ಹೇಳಿದ ಮಾತನ್ನು ಕೆಲವು ಆ್ಯಂಕರ್ ಗಳು ನಿಜ ಅಂತ ಪ್ರೋವ್ ಮಾಡಲು ಹೊರಟಿದ್ದಾರೆ ಅನ್ನೋ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಕಾಣಬಹುದಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: