ಮಳೆ ಇಲ್ಲದೇ ಬೆಳೆ ನಾಶ: ಚಿಕ್ಕಮಗಳೂರಿನಲ್ಲಿ ಮತ್ತೋರ್ವ ರೈತ ಸಾವಿಗೆ ಶರಣು - Mahanayaka

ಮಳೆ ಇಲ್ಲದೇ ಬೆಳೆ ನಾಶ: ಚಿಕ್ಕಮಗಳೂರಿನಲ್ಲಿ ಮತ್ತೋರ್ವ ರೈತ ಸಾವಿಗೆ ಶರಣು

chikkamagaluru
01/09/2023


Provided by

ಚಿಕ್ಕಮಗಳೂರು: ಮಳೆ ಇಲ್ಲದೇ ಬೆಳೆ ನಾಶವಾದ ಕಾರಣ ಮನನೊಂದ ಮತ್ತೋರ್ವ ರೈತ ಸಾವಿಗೆ ಶರಣಾದ ಘಟನೆ  ಚಿಕ್ಕಮಗಳೂರು ಜಿಲ್ಲೆಯ  ಅಜ್ಜಂಪುರ ತಾಲೂಕಿನ ಚಿಕ್ಕನಲ್ಲೂರು ಗ್ರಾಮದಲ್ಲಿ ನಡೆದಿದೆ.

ಪರಮೇಶ್ವರಪ್ಪ (52) ಮೃತಪಟ್ಟವರಾಗಿದ್ದಾರೆ. 3 ಎಕರೆ ಜಮೀನನಲ್ಲಿ ಹಾಕಿದ್ದ ಈರುಳ್ಳಿ ಬೆಳೆ ಸಂಪೂರ್ಣವಾಗಿ ನಾಶವಾದ ಕಾರಣ, ಬೆಳೆಯನ್ನು ನಂಬಿ ಮಾಡಿದ್ದ ಸಾಲವನ್ನು ತೀರಿಸುವುದು ಹೇಗೆ ಎಂಬ ಚಿಂತೆಯಿಂದ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

ಪರಮೇಶ್ವರಪ್ಪರವರು3 ಎಕರೆ ಜಮೀನನಲ್ಲಿ ಹಾಕಿದ್ದ ಈರುಳ್ಳಿ ಬೆಳೆ ಬೆಳೆದಿದ್ದರು. ಇದಕ್ಕಾಗಿ ಬ್ಯಾಂಕ್, ಬಡ್ಡಿ ಹಾಗೂ ಕೈಸಾಲ ಸೇರಿ 5 ಲಕ್ಷ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.

ನಿನ್ನೆ ಗಿರಿಯಾಪುರದ ರೈತ ಸತೀಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ರು  ಇದೀಗ ಮತ್ತೋರ್ವ ರೈತ ಸಾವಿಗೆ ಶರಣಾಗಿದ್ದು ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ನೊಂದ ರೈತರ ಪರ ನಿಂತು ರೈತರ ಜೀವ ಉಳಿಸಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.

ಘಟನೆ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ