ಡಿಕೆಶಿ ಸಿಎಂ ಆಗೋದು ನಿಶ್ಚಿತ: ವಿನಯ್ ಗುರೂಜಿ ಭವಿಷ್ಯ - Mahanayaka
2:46 PM Saturday 25 - January 2025

ಡಿಕೆಶಿ ಸಿಎಂ ಆಗೋದು ನಿಶ್ಚಿತ: ವಿನಯ್ ಗುರೂಜಿ ಭವಿಷ್ಯ

d k shivakumar
10/01/2025

ಚಿಕ್ಕೋಡಿ: ಡಿಸಿಎಂ ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ಆರಂಭಿಸಿದ್ದಾರೆ. ಇದು ಸಿಎಂ ಸ್ಥಾನಕ್ಕೆ ಏರುವುದಕ್ಕೆ ಹೋರಾಟ ಆರಂಭಿಸುವ ಲಕ್ಷಣವೇ ಎನ್ನುವ ಅನುಮಾನಗಳ ನಡುವೆಯೇ ಇದೀಗ ಚಿಕ್ಕಮಗಳೂರಿನ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ, ಡಿಕೆಶಿ ಸಿಎಂ ಆಗುವುದು ನಿಶ್ಚಿತ ಎಂದು ಭವಿಷ್ಯ ನುಡಿದಿದ್ದಾರೆ.

ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು,  ಡಿಕೆಶಿ ನಾಟಕ ಮಾಡದ ರಾಜಕಾರಣಿ, ಅವರಿಗೆ ನಾಟಕ ಮಾಡಲು ಬರುವುದಿಲ್ಲ, ಅವರು ಸಿಎಂ ಆದರೆ ಖುಷಿ ಪಡುತ್ತೇವೆ, ಅವರು ಸಿಎಂ ಆಗಲಿ ಅಂತ ಪ್ರಾರ್ಥನೆ ಮಾಡುತ್ತೇವೆ ಎಂದಿದ್ದಾರೆ.

ಅಜ್ಜಯ್ಯನ ಮೇಲೆ ನಿಷ್ಠೆ ಧರ್ಮದ ಮೇಲೆ ಗೌರವ ಹೊಂದಿರುವ ಅವರಿಗೆ ಗುರುಗಳ ಅನುಗ್ರಹವಿದೆ. ಇದೇ ಸರ್ಕಾರದ ಅವಧಿಯಲ್ಲಿ ಸಿಎಂ ಸೀಟಲ್ಲಿ ಕೂರುತ್ತಾರೆ ಎಂದು ಭವಿಷ್ಯ ನುಡಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ