ದಲಿತ ನಾಯಕರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದು ನೂರಕ್ಕೆ ನೂರು ಸತ್ಯ, ಇವರೆಲ್ಲ ಗಂಜಿ ಗಿರಾಕಿಗಳು | ಶಿವರಾಜ ತಂಗಡಗಿ ಕಿಡಿ - Mahanayaka
10:01 AM Friday 19 - September 2025

ದಲಿತ ನಾಯಕರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದು ನೂರಕ್ಕೆ ನೂರು ಸತ್ಯ, ಇವರೆಲ್ಲ ಗಂಜಿ ಗಿರಾಕಿಗಳು | ಶಿವರಾಜ ತಂಗಡಗಿ ಕಿಡಿ

shivaraj tangadagi
11/11/2021

ಕೊಪ್ಪಳ:  ದಲಿತ ನಾಯಕರಾದ ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ, ನಾರಾಯಣಸ್ವಾಮಿ ಅವರು ತಮ್ಮ ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿರುವುದು ನೂರಕ್ಕೆ ನೂರು ಸತ್ಯ. ಇವರೆಲ್ಲ ದಲಿತ ಸಮುದಾಯಕ್ಕಾಗಿ ಏನು ಮಾಡಿದ್ದಾರೆ? ಇವರ ಸ್ವಾರ್ಥಕ್ಕೆ, ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಹೇಳಿದ ಹೇಳಿಕೆ ನೂರಕ್ಕೆ ನೂರು ಸತ್ಯ. ಬಿಜೆಪಿಯಲ್ಲಿ ನಿಜವಾಗಿಯೂ ದಲಿತ ನಾಯಕರಿಲ್ಲ. ಇವರೆಲ್ಲ, ನಮಗೆ ಮಂತ್ರಿ ಸ್ಥಾನ ಸಿಗುತ್ತದೆ ಅಂತ ಹೋಗಿದ್ದಾರೆ. ಇವರು ಗಂಜಿ ಗಿರಾಕಿಗಳು ಎಂದು ಸಿದ್ದರಾಮಯ್ಯ ಹೇಳಿಕೆಯನ್ನು ಬೆಂಬಲಿಸಿದರು.

ಅನಂತ್ ಕುಮಾರ ದಲಿತರನ್ನು ಬೊಗಳುವ ನಾಯಿಗಳು ಎಂದು ರಾಜಾರೋಷವಾಗಿ ಹೇಳುವಾಗ ಈ ಬಿಜೆಪಿ ಎಸ್ ಸಿ ಮೋರ್ಚಾ ಎಲ್ಲಿ ಕಣ್ಣು ಮುಚ್ಚಿ ಹೋಗಿತ್ತಾ? ತೇಜಸ್ವಿ ಸೂರ್ಯ ಅಂಬೇಡ್ಕರ್ ಅವರನ್ನು ದೇಶದ್ರೋಹಿ ಎಂದಾಗ ಬಿಜೆಪಿ ಎಸ್ ಸಿ ಮೋರ್ಚಾ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ಇತ್ತೀಚಿನ ಸುದ್ದಿ