ನಾನು ಜೀವಂತವಿದ್ದೇನೆ: ತನ್ನ ಹತ್ಯೆಯ ವದಂತಿಯ ಬಗ್ಗೆ ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ಸ್ಪಷ್ಟನೆ - Mahanayaka

ನಾನು ಜೀವಂತವಿದ್ದೇನೆ: ತನ್ನ ಹತ್ಯೆಯ ವದಂತಿಯ ಬಗ್ಗೆ ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ಸ್ಪಷ್ಟನೆ

nisha dahiya
10/11/2021

ನವದೆಹಲಿ: ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ಮತ್ತು ಅವರ ಸಹೋದರ ಸೂರಜ್ ಅವರನ್ನು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ ಎನ್ನುವ ಸುಳ್ಳು ಸುದ್ದಿಯೊಂದು ಹರಡಿದ ಬೆನ್ನಲ್ಲೇ ಅವರು ವಿಡಿಯೋ ಮೂಲಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ.

ಹರ್ಯಾನದ ಸೋನಿಪತ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ಹಾಗೂ ಅವರ ಸಹೋದರ ಸೂರಜ್ ಮೃತಪಟ್ಟಿದ್ದಾರೆ ಎಂದು  ವದಂತಿ ಹಬ್ಬಿತ್ತು. ಈ ಬಗ್ಗೆ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಅವರು,  ನಾನು ಸುರಕ್ಷಿತವಾಗಿದ್ದೇನೆ. ನನ್ನ ಮುಂದಿನ ಪಂದ್ಯಕ್ಕಾಗಿ ಸದ್ಯ ಗೊಂಡದಲ್ಲಿದ್ದೇನೆ ಚೆನ್ನಾಗಿದ್ದೇನೆ ಎಂದು ತಿಳಿಸಿದ್ದಾರೆ.

ನಡೆದದ್ದೇನು?

ವಿಶ್ವವಿದ್ಯಾಲಯಮಟ್ಟದ ಕುಸ್ತಿಪಟು ನಿಶಾ ದಹಿಯಾ ಹಾಗೂ ಅವರ ಸಹೋದರನನ್ನು ಗುಂಡು ಹಾರಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ರಾಷ್ಟ್ರಮಟ್ಟದ ಕುಸ್ತಿಪಟು ನಿಶಾ ದಹಿಯಾ ಹಾಗೂ ಇವರಿಬ್ಬರ ಹೆಸರು ಒಂದೇ ಆಗಿರುವುದರಿಂದಾಗಿ ಈ ಗೊಂದಲ ಉಂಟಾಗಿದ್ದು, ಹೀಗಾಗಿ ಈ ವದಂತಿ ಹಬ್ಬಿತ್ತು ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಮರಿ ಆನೆಗೆ “ಪುನೀತ್ ರಾಜ್ ಕುಮಾರ್” ಎಂದು ನಾಮಕರಣ ಮಾಡಿದ ಅರಣ್ಯ ಇಲಾಖೆ

ಪರಿಪೂರ್ಣ ಕಲಾವಿದ ಸೃಜನಶೀಲತೆಯ ಮೇರು-ಶಂಕರ್ ನಾಗ್

ಖಾಸಗಿ ಬಸ್ ಗೆ ಡಿಕ್ಕಿ ಹೊಡೆದ ಟ್ಯಾಂಕರ್: ಹೊತ್ತಿ ಉರಿದ ಬಸ್ ನಲ್ಲಿದ್ದ 12 ಮಂದಿ ದಾರುಣ ಸಾವು

ಬಿಟ್ ಕಾಯಿನ್ ದಂಧೆ ಆರೋಪಿ ಬಿಡುಗಡೆ: ಜಾಮೀನು ಕೊಟ್ಟೋರು ಯಾರು?

ಮೊಣಕಾಲು ನೀರಿನಲ್ಲಿ ದೋಣಿಯಲ್ಲಿ ಕುಳಿತು ಮಾಜಿ ಸಿಂಗಂ ಅಣ್ಣಾಮಲೈಯಿಂದ ರಕ್ಷಣಾ ಕಾರ್ಯ!

ಬಿಟ್ ಕಾಯಿನ್ ಹಗರಣದಲ್ಲಿ ಸಿಎಂ ತಲೆದಂಡ | ಪ್ರಿಯಾಂಕ್ ಖರ್ಗೆ

ಮಗನ ಪ್ರೇಯಸಿಯ ಮೇಲೆ ತಂದೆಯಿಂದ ಅತ್ಯಾಚಾರ!

ಇತ್ತೀಚಿನ ಸುದ್ದಿ