ರೇಣುಕಾಸ್ವಾಮಿ ಸಾವಿನ ಬಗ್ಗೆ ದರ್ಶನ್ ಗೆ 1% ಕೂಡ ಗೊತ್ತಿಲ್ಲ!

ರೇಣುಕಾಸ್ವಾಮಿ ಸಾವಿನ ಬಗ್ಗೆ ದರ್ಶನ್ ಅವರಿಗೆ 1% ಏನೂ ಗೊತ್ತಿಲ್ಲ. ಯಾರೋ ಮಾಡಿದ್ದೋ ತಪ್ಪಿಗೆ ದರ್ಶನ್ ಇಂದು ಈ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ದರ್ಶನ್ ಪರ ವಕೀಲ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.
ಮಾಧ್ಯಮಗಳ ಕೆಲವು ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಇಲ್ಲಿಗೆ ಬಂದೆ ಅಂದಮಾತ್ರಕ್ಕೆ ನಾನು ಏನೋ ಮಾಡಿದೆ ಎನ್ನೋದು ತಪ್ಪು. ಪೊಲೀಸರು ಬಂದಬಳಿಕ ದರ್ಶನ್ ಅವರಿಗೆ ಈ ಕೊಲೆಯ ಬಗ್ಗೆ ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ.
ಸಾವಿನ ಬಳಿಕ ದರ್ಶನ್ ಅವರಿಗೆ ಈ ಮಾಹಿತಿ ನೀಡಿದ್ದೇವೆ ಎಂದು ಹೇಳಲಾಗಿದೆ. ದರ್ಶನ್ ಅವರು ಹೊಡೆದಿದ್ದಾರೆ ಎನ್ನೋದಿಕ್ಕೆ ಸಾಕ್ಷಿಯೇ ಇಲ್ಲ. ಇಲ್ಲಿ ಪವಿತ್ರಾ ಗೌಡ ತಪ್ಪು ಕೂಡ ಇಲ್ಲ. ನಾನು ಶವದ ಫೋಟೋ ನೋಡಿದ್ದೇನೆ. ಯಾರೋ ಹೊಡೆದಿರೋದಿಕ್ಕೆ ಆ ಥರ ದೇಹದಲ್ಲಿ ಗಾಯ ಆಗಿಲ್ಲ, ನಾಯಿ ಕಚ್ಚಿರುವ ಗಾಯ ಇದೆ. ಮರಣೋತ್ತರ ಪರೀಕ್ಷೆ ಬಂದಮೇಲೆ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದು ನಾರಾಯಣಸ್ವಾಮಿ ಹೇಳಿದರು.
ಮುಗ್ಧರಿಗೆ ಶಿಕ್ಷೆ ಆಗಬಾರದು. ರೇಣುಕಾಸ್ವಾಮಿಗೆ ಕುಡಿತದ ಚಟ ಇರಬಹುದು, ಯಾರೋ ಹೊಡೆದಿರಬಹುದು. ನಾವು ಕೊಂದಿದ್ದೇವೆ, ಹೊಡೆದಿದ್ದೇವೆ ಅಂತ ದರ್ಶನ್ ಆಗಲೀ, ಪವಿತ್ರಾ ಗೌಡ ಅವರಾಗಲೀ ಒಪ್ಪಿಕೊಂಡಿಲ್ಲ. ದರ್ಶನ್, ಪವಿತ್ರಾ ಗೌಡ ಆಗಲೀ ಅವರನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತಗೊಂಡಿದ್ದಾರೆ. ಕೋರ್ಟ್‌ನಲ್ಲಿ ನಾವು ದಾಖಲಾತಿ ನೀಡುತ್ತೇವೆ ಎಂದು ಅವರು ಹೇಳಿದರು.
ಬೆಂಗಳೂರು ನಗರದ ಸುಮನಹಳ್ಳಿ ಮೇಲ್ಸೇತುವೆ ಸಮೀಪದ ರಾಜಕಾಲುವೆ ಸಮೀಪ ಜೂ.9ರಂದು ಬೆಳಗ್ಗೆ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ಮೃತದೇಹ ಪರಿಶೀಲಿಸಿ ವಶಕ್ಕೆ ಪಡೆದಿದ್ದರು. ಈ ನಿಟ್ಟಿನಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡು ಮೃತ ವ್ಯಕ್ತಿ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುದನ್ನು ಪತ್ತೆ ಹಚ್ಚಿದ್ದರು.
ಇದರ ಬೆನ್ನಲ್ಲೇ ಕೊಲೆಗಾರರನ್ನು ಪತ್ತೆ ಹಚ್ಚಲು ತನಿಖೆ ತೀವ್ರಗೊಳಿಸಿದ್ದಾಗಲೇ ಸೋಮವಾರ ಕಾಮಾಕ್ಷಿಪಾಳ್ಯ ಠಾಣೆಗೆ ಶರಣಾದ ನಾಲ್ವರು ರೇಣುಕಾಸ್ವಾಮಿಯನ್ನು ಕೊಂದಿದ್ದು ತಾವೇ ಎಂದು ತಪ್ಪೊಪ್ಪಿಕೊಂಡಿದ್ದರು. ಆದರೆ, ಕೊಲೆ ಕಾರಣದ ಬಗ್ಗೆ ಆರೋಪಿಗಳು ಭಿನ್ನ ಹೇಳಿಕೆಗಳನ್ನು ನೀಡಿದ್ದು ಜೈಲು ಸೇರಿದರು. ಪೊಲೀಸರಿಗೆ ಸಂಶಯ ಮೂಡಿಸಿತ್ತು. ಹೀಗಾಗಿ ಈ ಎಲ್ಲಾ ಸುಳಿವುಗಳನ್ನು ಭೇದಿಸಲು, ಶರಣಾಗತಿಯಾದವರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ದರ್ಶನ್ ಮತ್ತು ತಂಡ ನಡೆಸಿದ್ದ ಕೃತ್ಯ ಬಯಲಾಗಿತ್ತು ಎಂದು ತನಿಖಾ ಮೂಲಗಳು ಹೇಳಿವೆ. ಸದ್ಯ ಈ ಪ್ರಕರಣಕ್ಕೂ ದರ್ಶನ್ ಮತ್ತು ತಂಡಕ್ಕೂ ಸಂಬಂಧ ಇದೆ ಎನ್ನುವ ಶಂಕೆಯಲ್ಲಿ ತನಿಖೆ ನಡೆಯುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97