ಹಣ ಇಲ್ಲದೆ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ,  ಇಲ್ಲಿ ಮಾತ್ರ ಮೂರ್ತಿಗೆ 1.11 ಕೋಟಿ ಹಣದಿಂದ ಸಿಂಗಾರ! - Mahanayaka
5:18 PM Thursday 29 - January 2026

ಹಣ ಇಲ್ಲದೆ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ,  ಇಲ್ಲಿ ಮಾತ್ರ ಮೂರ್ತಿಗೆ 1.11 ಕೋಟಿ ಹಣದಿಂದ ಸಿಂಗಾರ!

28/10/2020

ಒಂದೆಡೆ ಕೊರೊನಾದಿಂದಾಗಿ ಇಡೀ ದೇಶವೇ ನಲುಗಿ ಹೋಗಿದೆ. ವ್ಯಾಪಾರಸ್ತರು ತಮ್ಮ ವ್ಯಾಪಾರದಲ್ಲಿ ನಷ್ಟ ಅನುಭವಿಸಿ, ನೇಣಿಗೆ ಕೊರಳೊಡ್ಡುತ್ತಿದ್ದಾರೆ. ವಿದ್ಯಾರ್ಥಿಗಳ ತಮ್ಮ ಒಂದು ಶೈಕ್ಷಣಿಕ ವರ್ಷವನ್ನು ಕಳೆದುಕೊಂಡು ಮರುಗುತ್ತಿದ್ದಾರೆ. ಕಾರ್ಖಾನೆ ಮೊದಲಾದ ಕಡೆ ಕೆಲಸ ಮಾಡುತ್ತಿದ್ದವರು. ಊರಿಗೆ ಮರಳಿ, ಉದ್ಯೋಗಕ್ಕೆ ಏನು ಮಾಡಬೇಕು ಎಂದು ಯೋಚಿಸುತ್ತಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಭಾರತದ ಬಡತವನ್ನು ಕೆಣಕುವಂತೆ ದೇವರ ಮೂರ್ತಿಗೆ 1.11 ಕೋಟಿ ರೂಪಾಯಿ ನೋಟುಗಳಿಂದ ಅಲಂಕರಿಸಲಾಗಿದೆ.\




 

ಇಡೀ ದೇಶವೇ ಬಡತನದಲ್ಲಿರುವಾಗ ಇಂತಹ ಆಡಂಬರ ಬೇಕಿದೆಯೇ? ಅಷ್ಟಕ್ಕೂ ದೇವರ ಮೂರ್ತಿಗೆ ಹಣದ ಅಲಂಕಾರಕ್ಕಿಂತಲೂ ಜನರ ಜೀವನದ ದಾರಿಗೆ ಸದ್ಯ ಹಣದ ಅಲಂಕಾರ ಬೇಕಿದೆ. ದಸರದ ಪ್ರಯುಕ್ತ ಇಂತಹ ಅರ್ಥ ಹೀನ ಆಡಂಬರದ ಆಚರಣೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ನೀವು, ಆಕ್ರೋಶದ ಮಾತುಗಳು ಕೇಳಿ ಬಂದಿವೆ.


ತೆಲಂಗಾಣದ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಈ ರೀತಿಯಾಗಿ ಮೂರ್ತಿಯನ್ನು ಹಣದಲ್ಲಿ ಅಲಂಕರಿಸುವ ಪರಂಪರೆಯಿದೆಯಂತೆ.  ಸುಮಾರು 50 ಭಕ್ತರು ದೇವಿಯ ಮೂರ್ತಿಯನ್ನು ಹಣದಿಂದ ಅಲಂಕರಿಸಿದ್ದಾರಂತೆ. ಹಣದಿಂದ ದೇವರನ್ನು ಅಲಂಕರಿಸಿದ ನಂತರ ಯಾರು ಹಣ ನೀಡಿದ್ದಾರೋ ಅವರಿಗೆ ಹಣವನ್ನು ಮರಳಿಸಲಾಗುವುದು ಎಂದು ತಿಳಿದು ಬಂದಿದೆ. ಆದರೆ ಆರ್ಥಿಕ ಸಂಕಷ್ಟದಿಂದ ದೇಶವೇ ಬೇಯುತ್ತಿರುವಾಗ ಇಂತಹ ಆಚರಣೆಗಳು ಬಡವರ ಬದುಕನ್ನು ವ್ಯಂಗ್ಯ ಮಾಡಿದಂತೆ ಕಂಡು ಬರುವುದಿಲ್ಲವೇ ಎನ್ನುವ ಮಾತುಗಳು ಕೇಳಿ ಬಂದಿದೆ.


ಇತ್ತೀಚಿನ ಸುದ್ದಿ