ಮುನಿರತ್ನ ಪರ ಮತಯಾಚಿಸಲು ಇಂದು ನಟಿ ಖುಷ್ಬೂ ಬೆಂಗಳೂರಿಗೆ - Mahanayaka

ಮುನಿರತ್ನ ಪರ ಮತಯಾಚಿಸಲು ಇಂದು ನಟಿ ಖುಷ್ಬೂ ಬೆಂಗಳೂರಿಗೆ

28/10/2020

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡಲು  ನಟಿ ಖುಷ್ಬೂ ಬೆಂಗಳೂರಿಗೆ ಇಂದು ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.


ಇತ್ತೀಚೆಗೆಷ್ಟೆ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಖ್ಯಾತ ನಟಿ ಖುಷ್ಬೂ ನಿನ್ನೆಯಷ್ಟೇ ಪ್ರತಿಭಟನೆಯೊಂದರ ವೇಳೆ ಬಂಧನಕ್ಕೊಳಗಾಗಿದ್ದರು. ಇಂದು ಅವರು ಕರ್ನಾಟಕಕ್ಕೆ ಆಗಮಿಸಲಿದ್ದು, ಮುನಿರತ್ನ ಪರ ಮತಯಾಚಿಸಲಿದ್ದಾರೆ ಎಂದು ತಿಳಿದು ಬಂದಿದೆ.


ಯಶವಂತಪುರ, ಲಗ್ಗೆರೆ ವಾರ್ಡ್, ಸಿದ್ಧಾರ್ಥ ನಗರದಲ್ಲಿ ಖುಷ್ಬೂ ಮತಯಾಚಿಸಲಿದ್ದಾರೆ. ಸಿನಿಮಾ ನಿರ್ಮಾಪಕರೂ ಆಗಿರುವ ಮುನಿರತ್ನ ಅವರ ಪರವಾಗಿ ಹಲವು ತಾರೆಯರು ಪ್ರಚಾರಕ್ಕೆ ಧುಮುಕುವ ಸಾಧ್ಯತೆಗಳು ಕಂಡು ಬಂದಿದೆ.

ವಿಡಿಯೋ ನೋಡಿ



ಇತ್ತೀಚಿನ ಸುದ್ದಿ