ಬರೀ ಮೈಯಲ್ಲಿ ನ್ಯಾಯಾಲಯದ ವಿಚಾರಣೆಗೆ ಆಗಮಿಸಿದ ವಕೀಲ | ಸುಪ್ರೀಂಕೋರ್ಟ್ ಆಕ್ಷೇಪ | ನಡೆದದ್ದು ಏನು ಗೊತ್ತಾ? - Mahanayaka

ಬರೀ ಮೈಯಲ್ಲಿ ನ್ಯಾಯಾಲಯದ ವಿಚಾರಣೆಗೆ ಆಗಮಿಸಿದ ವಕೀಲ | ಸುಪ್ರೀಂಕೋರ್ಟ್ ಆಕ್ಷೇಪ | ನಡೆದದ್ದು ಏನು ಗೊತ್ತಾ?

28/10/2020

ನವದೆಹಲಿ: ಕೊರೊನಾದಿಂದಾಗಿ ಎಲ್ಲ ಕೆಲಸಗಳೂ ಆನ್ ಲೈನ್ ನಲ್ಲಿಯೇ ನಡೆಯುತ್ತಿದೆ. ಈ ನಡುವೆ ಆನ್ ಲೈನ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ಗೆ ಬರುವಂತಹ ಸಂದರ್ಭದಲ್ಲಿ ನಾವು ಮನೆಯಲ್ಲಿಯೇ ಇದ್ದೀವಿ ಅಲ್ವಾ ಅಂತ ಬರೇ ಬನಿಯನ್ ಹಾಕಿಕೊಂಡು ಇಲ್ಲವೇ ಬರೀ ಮೈಯಲ್ಲಿಯೇ ಲೈವ್ ಗೆ ಬರುವುದು ಕಂಡು ಬಂದಿದೆ. ಇಂತಹದ್ದೇ ಒಂದು ಘಟನೆಯಲ್ಲಿ ವಕೀಲರೊಬ್ಬರು ವಿಚಾರಣೆಯ ಸಂದರ್ಭ ಬರೀ ಮೈಯಲ್ಲಿಯೇ ವಿಡಿಯೋ ಕಾನ್ಫರೆನ್ಸ್ ಗೆ ಬಂದು ಇದೀಗ ಸುದ್ದಿಯಲ್ಲಿದ್ದಾರೆ.Provided by

ಸುದರ್ಶನ್‌ ಟಿವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದ ವಕೀಲರೊಬ್ಬರು ಷರ್ಟ್ ಧರಿಸದೇ ಬರೀ ಮೈಯಲ್ಲಿಯೇ ವಿಚಾರಣೆಗೆ ಹಾಜರಾಗಿದ್ದಾರೆ. ಇನ್ನೂ ಈ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಈ ಅಸಭ್ಯ ವರ್ತನೆಯನ್ನು ತೀವ್ರವಾಗಿ ಆಕ್ಷೇಪಿಸಿದೆ.


‘ವಕೀಲರ ಕಾಯ್ದೆಯ ಅನ್ವಯ ನ್ಯಾಯಾಲಯದ ವಿಚಾರಣೆಗೆ ಹಾಜರಾಗುವ ವಕೀಲರು ಸಮವಸ್ತ್ರ ಧರಿಸುವುದು ಕಡ್ಡಾಯ. ಆದರೆ ಹಲವಾರು ವಕೀಲರು ಬೇಜಬ್ದಾರಿಯಿಂದ ವರ್ತಿಸುತ್ತಿದ್ದಾರೆ. ನ್ಯಾಯಾಲಯದ ಬಗ್ಗೆ ವಕೀಲರ ಈ ರೀತಿಯ ವರ್ತನೆ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಡಿ. ವೈ ಚಂದ್ರಚೂಡ್‌ ಹಾಗೂ ಇಂದು ಮಲ್ಹೋತ್ರ ಅವರಿದ್ದ ಪೀಠವು ಆಕ್ಷೇಪ ವ್ಯಕ್ತಪಡಿಸಿದೆ.Provided by

ರಾಜಸ್ಥಾನದಲ್ಲಿ ಓರ್ವ ವಕೀಲರು ಬನಿಯನ್ ಹಾಕಿಕೊಂಡು ವಿಚಾರಣೆಗೆ ಹಾಜರಾಗಿದ್ದರು. ಭಾರತದಲ್ಲಿ ವಕೀಲ ಸ್ಥಾನದಲ್ಲಿದ್ದವರು ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂದು ತಿಳಿಯದವರೇ? ಎನ್ನುವ ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿದೆ. ಸುಪ್ರೀಂ ಕೋರ್ಟ್ ನ ವಿಚಾರಣೆಗೂ, ಬರೀ ಮೈಯಲ್ಲಿ ಬಂದಿರುವ ವಕೀಲ ಎಷ್ಟೊಂದು ಜವಾಬ್ದಾರಿಯುತ ವಕೀಲ ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.


 

ಇತ್ತೀಚಿನ ಸುದ್ದಿ