ಕಾಣೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿ ವಿಶೇಷ ಬಡ್ತಿ ಪಡೆದ ಮಹಿಳಾ ಪೊಲೀಸ್ - Mahanayaka
10:34 AM Saturday 23 - August 2025

ಕಾಣೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿ ವಿಶೇಷ ಬಡ್ತಿ ಪಡೆದ ಮಹಿಳಾ ಪೊಲೀಸ್

19/11/2020


Provided by

ನವದೆಹಲಿ:  ಕಾಣೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿದ  ಮಹಿಳಾ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಅವರಿಗೆ ವಿಶೇಷ ಬಡ್ತಿ ನೀಡಲಾಗಿದ್ದು, ಔಟ್ ಆಫ್ ಟರ್ನ್ ಪ್ರಮೋಷನ್ ಅಡಿಯಲ್ಲಿ ವಿಶೇಷ ಬಡ್ತಿ ಪಡೆದ ದೆಹಲಿಯ ಮೊದಲ ಪೊಲೀಸ್ ಎಂಬ ಖ್ಯಾತಿಗೆ ಮಹಿಳಾ ಹೆಡ್ ಕಾನ್ಸ್ ಟೇಬಲ್ ಒಬ್ಬರು ಪಾತ್ರರಾಗಿದ್ದಾರೆ.

ಸಮಯ್ ಪುರ ಬಾಡ್ಲಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಸೀಮಾ ಢಾಕಾ ಎರಡೂವರೆ ತಿಂಗಳಲ್ಲಿ ನಾಪತ್ತೆಯಾದ 76 ಮಕ್ಕಳನ್ನು ಪತ್ತೆ ಹಚ್ಚಿ ವಿಶೇಷ ಬಡ್ತಿಯನ್ನು ಪಡೆದುಕೊಂಡಿದ್ದಾರೆ. ಕಾಣೆಯಾದ ಮಕ್ಕಳನ್ನು ದೆಹಲಿಯಲ್ಲಿ ಮಾತ್ರವಲ್ಲದೇ ಪಂಜಾಬ್, ಪಶ್ಚಿಮ ಬಂಗಾಳ ಮತ್ತಿತರ ರಾಜ್ಯಗಳಲ್ಲೂ ಪತ್ತೆ ಹಚ್ಚಿದ್ದಾರೆ.

 2006 ಜುಲೈ 3 ರಂದು ದೆಹಲಿ ಪೊಲೀಸ್ ಸೇವೆಗೆ ಸೇರಿದ ಢಾಕಾ, 2012ರವರೆಗೂ ಅಗ್ನೇಯ ದೆಹಲಿಯಲ್ಲಿಯೇ ಸೇವೆಗೆ ನಿಯೋಜನೆಗೊಂಡಿದ್ದರು. 2014ರಲ್ಲಿ ಬಡ್ತಿ ಪಡೆದು ಹೆಡ್ ಕಾನ್ಸ್ ಟೇಬಲ್ ಆಗಿದ್ದಾರೆ.

ಇತ್ತೀಚಿನ ಸುದ್ದಿ