ಪರಿಶಿಷ್ಟ ಜಾತಿಯವರಿಗೆ ಹೇರ್ ಕಟಿಂಗ್ ಮಾಡಿದ ಕ್ಷೌರಿಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಜಾತಿ ಭಯೋತ್ಪಾದಕರು - Mahanayaka
2:01 AM Thursday 30 - November 2023

ಪರಿಶಿಷ್ಟ ಜಾತಿಯವರಿಗೆ ಹೇರ್ ಕಟಿಂಗ್ ಮಾಡಿದ ಕ್ಷೌರಿಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಜಾತಿ ಭಯೋತ್ಪಾದಕರು

19/11/2020

ಮೈಸೂರು: ಪರಿಶಿಷ್ಟ ಜಾತಿಯವರಿಗೆ ಹೇರ್ ಕಟಿಂಗ್ ಮಾಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಅನಾಗರಿಕ ಘಟನೆ  ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದ್ದು, ಕ್ಷೌರಿಕ ಮಲ್ಲಿಕಾರ್ಜುನ ಶೆಟ್ಟಿ ಅವರ ಕುಟುಂಬವನ್ನು ಬಹಿಷ್ಕರಿಸಲಾಗಿದೆ.

ಊರಿನ ಮುಖಂಡರು ಪರಿಶಿಷ್ಟ ವರ್ಗದವರಿಗೆ ಹೇರ್ ಕಟಿಂಗ್ ಮಾಡಬಾರದು ಎಂದು ನಿರ್ಬಂಧ ವಿಧಿಸಿದ್ದರು. ಆದರೆ ಮಲ್ಲಿಕಾರ್ಜುನ ಶೆಟ್ಟಿ ಸರ್ಕಾರದ ಆದೇಶದಂತೆ ಗ್ರಾಮದ ಪ್ರತಿಯೊಬ್ಬರಿಗೂ ಕಟಿಂಗ್ ಮಾಡುತ್ತೇನೆ ಎಂದು ಪರಿಶಿಷ್ಟ ವರ್ಗದವರಿಗೂ ಕಟಿಂಗ್ ಮಾಡಿದ್ದು, ಈ ಕಾರಣದಿಂದ ಗ್ರಾಮದ ಮುಖಂಡ ಚೆನ್ನನಾಯಕ ಹಾಗೂ ಈತನ ಸಹಚರರು ಸೇರಿ 50 ಸಾವಿರ ದಂಡ ಹಾಗೂ ಜೊತೆಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ವರದಿಯಾಗಿದೆ.

ಸಾಮಾಜಿಕ ಬಹಿಷ್ಕಾರದಿಂದ ಸತತ ಮೂರು ತಿಂಗಳಿನಿಂದಲೂ ಮಲ್ಲಿಕಾರ್ಜುನ ಶೆಟ್ಟಿ ಅವರ ಕುಟುಂಬ ಸಂಕಷ್ಟದಲ್ಲಿದ್ದು, ಈ ಹಿನ್ನೆಲೆಯಲ್ಲಿ ಅವರು ಈ ಬಹಿಷ್ಕಾರ ತೆರವುಗೊಳಿಸಲು ತಹಶೀಲ್ದಾರ್ ಗೆ ಮನವಿ ನೀಡಿದ್ದಾರೆ. ಇನ್ನೂ ಈ ಬಗ್ಗೆ ನಂಜನಗೂಡು ತಹಶೀಲ್ದಾರ್ ಮಹೇಶ್ ಕುಮಾರ್ ಪೊಲೀಸರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ