ನವಜಾತ ಅವಳಿ ಶಿಶುಗಳ ಹತ್ಯೆ ಪ್ರಕರಣ: ಆರೋಪಿಯ ಬಂಧನ - Mahanayaka
3:16 AM Saturday 10 - January 2026

ನವಜಾತ ಅವಳಿ ಶಿಶುಗಳ ಹತ್ಯೆ ಪ್ರಕರಣ: ಆರೋಪಿಯ ಬಂಧನ

10/07/2024

ಹೆಣ್ಣುಮಕ್ಕಳು ಇಷ್ಟವಿಲ್ಲ ಎಂದು ತನ್ನ ನವಜಾತ ಅವಳಿ ಶಿಶುಗಳನ್ನೇ ಹತ್ಯೆ ಮಾಡಿ ಮೃತದೇಹಗಳನ್ನು ಹೂತುಹಾಕಿದ್ದ ಆರೋಪದಲ್ಲಿ ದಿಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

32 ವರ್ಷ ವಯಸ್ಸಿನ ಆರೋಪಿಯನ್ನು ಹರ್ಯಾಣದಲ್ಲಿ ಬಂಧಿಸಲಾಗಿದೆ.
ಹರ್ಯಾಣದ ರೋಹ್ಟಕ್‍ನ ಸೆಕ್ಟರ್ 36ರಲ್ಲಿ ಮೇ 30ರಂದು ಸೋಳಂಕಿ ಪತ್ನಿ ಪೂಜಾ ಸೋಳಂಕಿ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದರು. ಈ ದಂಪತಿ ದೆಹಲಿಯ ಸುಲ್ತಾನಪುರಿ ಪ್ರದೇಶದಲ್ಲಿ ವಾಸವಿದ್ದರು.

ಆರೋಪಿ ನಿರಂತರವಾಗಿ ತನ್ನ ಸ್ಥಳವನ್ನು ಬದಲಾಯಿಸಿಕೊಂಡು, ದಿಲ್ಲಿ ಮತ್ತು ಹರ್ಯಾಣದಲ್ಲಿ ತಲೆ ಮರೆಸಿಕೊಂಡಿದ್ದ. ಈತನ ಪತ್ನಿ ಜೂನ್ 21ರಂದು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿತ್ತು. ಇಬ್ಬರು ಹೆಣ್ಣುಮಕ್ಕಳ ಹತ್ಯೆ ಬಗ್ಗೆ ಜೂನ್ 3ರಂದು ಸುಲ್ತಾನಪುರಿ ಠಾಣೆಯಿಂದ ದೂರವಾಣಿ ಕರೆ ಬಂದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ