ಮನೆಯ ಊಟ, ಬಟ್ಟೆ, ಚಮಚ, ಪುಸ್ತಕಕ್ಕಾಗಿ ಮನವಿ ಮಾಡಿದ್ದ ದರ್ಶನ್ ಗೆ ನಿರಾಸೆ: ಕೋರ್ಟ್ ನಲ್ಲಿ ಏನೇನು ನಡೆಯಿತು? - Mahanayaka

ಮನೆಯ ಊಟ, ಬಟ್ಟೆ, ಚಮಚ, ಪುಸ್ತಕಕ್ಕಾಗಿ ಮನವಿ ಮಾಡಿದ್ದ ದರ್ಶನ್ ಗೆ ನಿರಾಸೆ: ಕೋರ್ಟ್ ನಲ್ಲಿ ಏನೇನು ನಡೆಯಿತು?

darshan
10/07/2024

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಎದುರಿಸುತ್ತಿರುವ ನಟ ದರ್ಶನ್ ಗೆ ಹೈಕೋರ್ಟ್ ನಲ್ಲಿ ನಿರಾಸೆಯಾಗಿದ್ದು, ಮನೆಯ ಊಟ, ಬಟ್ಟೆ, ಚಮಚ, ಪುಸ್ತಕಗಳನ್ನು ನಿರೀಕ್ಷೆ ಮಾಡಿ ಹೈಕೋರ್ಟ್ ಗೆ ಮನವಿ ಮಾಡಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ಎಸ್.ಆರ್.ಕೃಷ್ಣಕುಮಾರ್ ನೇತೃತ್ವದ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ದರ್ಶನ್ ಪರ ವಕೀಲರು ವಾದ ಮಂಡಿಸಿದರು.

ವಾದದ ಆರಂಭದಲ್ಲೇ ಕೋರ್ಟ್​, ಜೈಲು ನಿಯಮಗಳನ್ನು ತೋರಿಸುವಂತೆ ಹೇಳಿತು. ಜೈಲಿನಲ್ಲಿರುವ ಪರಿಷ್ಕರಣೆ ನಿಯಮ ಎಂದು ಇದೆಯಲ್ವಾ? ಅದನ್ನು ಮೊದಲು ನಮಗೆ ತೋರಿಸಿ. ಆ ನಿಯಮಗಳನ್ನು ತೋರಿಸಿದ್ರೆ ಆದೇಶ ನೀಡಬಹುದು. ಅಲ್ಲದೇ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಆ ನಂತರ ನಾವು ಆದೇಶವನ್ನು ಮಾಡಬಹುದು ಎಂದು ನ್ಯಾಯಮೂರ್ತಿ ಕೃಷ್ಣ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇಸ್​​ ಗೆ ಸಂಬಂಧಿಸಿದ ಎಲ್ಲಾ ನಿಬಂಧನೆಗಳನ್ನ ಒಟ್ಟಿಗೆ ಮಾಡಿ ಸಲ್ಲಿಸಬೇಕು. ಜೈಲು ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆಯಾ? ವಿಚಾರಣಾಧೀನ ಕೋರ್ಟ್​ನಲ್ಲಿ ಈ ಕೋರಿಕೆ ಸಲ್ಲಿಸಲಾಗಿದೆಯಾ? ಅದಕ್ಕೂ ಸಹ ಉತ್ತರ ನೀಡಬೇಕು ಎಂದು ದರ್ಶನ್ ಪರ ವಕೀಲ ಫಣೀಂದ್ರ ಅವರಿಗೆ ಹೈಕೋರ್ಟ್ ಸೂಚನೆ ನೀಡಿತು. ಬಳಿಕ ಅರ್ಜಿ ವಿಚಾರಣೆಯನ್ನು ಜುಲೈ 18ಕ್ಕೆ ವಿಚಾರಣೆನ್ನು ಮುಂದೂಡಿತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ