ಉಡುಪಿ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಆಳವಡಿಕೆಗೆ ಆಗ್ರಹ - Mahanayaka
11:13 PM Saturday 31 - January 2026

ಉಡುಪಿ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಆಳವಡಿಕೆಗೆ ಆಗ್ರಹ

udupi
10/06/2023

ಉಡುಪಿ: ಕಾನೂನು ಸುವ್ಯವಸ್ಥೆ, ವಿದ್ಯಾರ್ಥಿಗಳು, ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ನಗರ ಪ್ರದೇಶದ ಆಯಾಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಆಳವಡಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಖ್ಯಾತ್ ಶೆಟ್ಟಿ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷಗಳಿಂದ ಕಲ್ಸಂಕ, ಕರಾವಳಿ ಜಂಕ್ಷನ್, ನಿಟ್ಟೂರು, ಕಲ್ಯಾಣಪುರ, ಮಣಿಪಾಲ, ಕಿನ್ನಿಮುಲ್ಕಿ, ಇಂದ್ರಾಳಿ ಸೇರಿದಂತೆ ನಗರದಲ್ಲಿರುವ ಹೆಚ್ಚಿನ ಸಿಸಿ ಟಿವಿಗಳು ಸುಸ್ಥಿತಿಯಲ್ಲಿ ಇಲ್ಲ. ಇದರ ಸೂಕ್ತ ನಿರ್ವಹಣೆ ಇಲ್ಲದೇ ಅಪರಾಧ ಚಟುವಟಿಕೆಗಳಿಗೆ ಅವಕಾಶ ನೀಡಿದಂತಾಗುತ್ತಿದೆ ಎಂದು ದೂರಿದರು.

ಉಡುಪಿ ಪ್ರವಾಸಿತಾಣ, ದೇವಾಲಯ, ಶೈಕ್ಷಣಿಕ ಕಾರಣಕ್ಕೆ ಸಾವಿರಾರು ಮಂದಿ ಬರುತಾತಿರೆ. ಆದರೆ ಇಲ್ಲಿನ ಯಾವ ಸಿಸಿ ಕ್ಯಾಮರಾ ಕೂಡಾ ಪ್ರಯೋಜನಕ್ಕೆ ಬರುತಿತಿಲ್ಲ. ಕಳ್ಳತನ, ಕೊಲೆ, ದರೋಡೆ, ಅಮಲು ಪದಾರ್ಥ ಸಾಗಾಟ, ಮೊಬೈಲ್ ಕಳವು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳನ್ನು ಹತಿತಿಕ್ಕಲು ಸಿಸಿ ಟಿವಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ ಆಯಾಕಟ್ಟಿನ ಸಿಸಿ ಟಿವಿಗಳು ಹಾಳಾಗಿರುವುದರಿಂದ ಪೊಲೀಸರ ತನಿಖೆ, ಆರೋಪಿಗಳ ಪತೆತಿ ವಿಳಂಬವಾಗುತಿತಿದೆ.

ಸಾವಿರಾರು ರೂ. ವ್ಯಯಿಸಿ ಅಳವಡಿಸಿರು ಸಿಸಿ ಟಿವಿ ನಿರ್ವಹಣೆಯನ್ನು ಖಾಸಗಿ ವ್ಯಕಿತಿಗೆ ವಹಿಸಿದ್ದು, ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿಲ್ಲ. ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕತಿ ಕ್ರಮ ತೆಗೆದುಕೊಳ್ಳಬೇಕೆಂದು ಒತಾತಿಯಿಸಿದರು.ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಯತೀಶ್ ಕರ್ಕೇರಾ, ಪ್ರದೀಪ್ ಸ್ಯಾಮುಯಲ್ ಸದಾನಂದ, ಸದಾಶಿವ ಕಟ್ಟೆಗುಡ್ಡೆಘಿ, ಅಬೂಬಕ್ಕರ್ ಖಾಸಿಂ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ