ಶೋಭನಿಗೂ ಫ್ರೀ ಎನ್ನುವುದು ಕಾಂಗ್ರೆಸ್ ನ ದುರಾಂಹಕಾರದ ಮಾತು: ಸಚಿವೆ ಶೋಭಾ ಕರಂದ್ಲಾಜೆ ಗರಂ - Mahanayaka

ಶೋಭನಿಗೂ ಫ್ರೀ ಎನ್ನುವುದು ಕಾಂಗ್ರೆಸ್ ನ ದುರಾಂಹಕಾರದ ಮಾತು: ಸಚಿವೆ ಶೋಭಾ ಕರಂದ್ಲಾಜೆ ಗರಂ

shobkaradajje
10/06/2023

ಚಿಕ್ಕಮಗಳೂರು: ಸರ್ಕಾರಿ ಬಸ್ ನಲ್ಲಿ ಶೋಭಾ ಕರಂದ್ಲಾಜೆಗೂ ಫ್ರೀ ಎಂದು ಕಾಂಗ್ರೆಸ್ ಹೇಳಿಕೆ ನೀಡಿರುವುದರ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದರು.


Provided by

ಮಹಿಳೆಯರಿಗೆ ಫ್ರೀ ಬಸ್ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿದ ಅವರು, ಹೆಣ್ಮಕ್ಕಳಿಗೆ ಕೊಟ್ಟಿರುವುದು ಖುಷಿಯಾಗಿದೆ, ಒಳ್ಳೆಯದಾಗಲಿ. ಪ್ರವಾಸ ಮಾಡಬಹುದು, ಬೇರೆ ಕಡೆ ಹೋಗಬಹುದು. ಆದ್ರೆ, ಶೋಭನಿಗೂ ಫ್ರೀ ಎಂಬ ದುರಾಂಹಕಾರದ ಮಾತನ್ನ ಕಾಂಗ್ರೆಸ್ ಹೇಳುತ್ತೆ, ಇದಕ್ಕೆ ಜನನೇ ಉತ್ತರ ಕೊಡ್ತಾರೆ ನಾನೇನೂ ಹೇಳಲ್ಲ ಎಂದರು.

ಪಠ್ಯ ಪುಸ್ತಕದಲ್ಲಿ ನಮ್ಮ ಮಕ್ಕಳು ಏನು ಕಲಿಯಬೇಕೆಂದು ನಾವೇ ನಿರ್ಧಾರ ಮಾಡಬೇಕು. ಅವರ ಬೆಳವಣಿಗೆ ಪ್ರಗತಿ, ಅಭ್ಯುದಯಕ್ಕೆ ಚರಿತ್ರೆ ತಿಳಿದುಕೊಳ್ಳಬೇಕು. ನಮ್ಮ ದೇಶವನ್ನು ತಿಳಿದುಕೊಳ್ಳಲು ಏನು ಕಲಿಸಬೇಕು ಅದೇ ಆಧಾರದಲ್ಲಿ ಕಲಿಸಬೇಕು ಎಂದರು.

ಪಠ್ಯ ಪುಸ್ತಕ ಅನ್ನೋದು ಪಾರ್ಟಿ, ಜಾತಿ, ಧರ್ಮದ ವಿಚಾರವಲ್ಲ. ನಾವು ಸಂವಿಧಾನ್ಮಕವಾಗಿ ಏನನ್ನ ಒಪ್ಪಿಕೊಂಡಿದ್ದೇವೋ, ಅದನ್ನೇ ಕಲಿಯುವಂತಹ ಅವಕಾಶವಾಗಬೇಕು. ಒಂದು ಸರ್ಕಾರ ಬಂದಾಗ ಒಂದು ಪಠ್ಯ, ಇನ್ನೊಂದು ಸರ್ಕಾರ ಬಂದಾಗ ಮತ್ತೊಂದು ಪಠ್ಯ ಸರಿಯಲ್ಲ, ನಮ್ಮ ದೇಶ ಭಕ್ತರ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ, ನಮ್ಮ ಸಂಸ್ಕೃತಿಯ ಬಗ್ಗೆ ಕಲಿಸುವ ಅನಿವಾರ್ಯತೆ ಇದೆ. ಈ ದೃಷ್ಟಿಯಿಂದ ರಾಜ್ಯ ಸರ್ಕಾರ ಯೋಚನೆ ಮಾಡಲಿ ಎಂದರು.

ಕಾಂಗ್ರೆಸ್ ಪಠ್ಯ, ಬಿಜೆಪಿಯ ಪಠ್ಯ ಅನ್ನೋದಕ್ಕಿಂತ ಹೆಚ್ಚು ನಮ್ಮ ಮಕ್ಕಳು ಏನನ್ನ ಕಲಿಯಬೇಕು, ಮುಂದಿನ ಪೀಳಿಗೆ ಎಲ್ಲಿಗೆ ಹೋಗಬೇಕು, ಏನಾಗಬೇಕು ಇದರ ಆಧಾರದಲ್ಲಿ ಪಠ್ಯ ಕೊಡುವುದು ಒಳ್ಳೆಯದು ಎಂದು ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ