ದೇವಿಯ ಹರಕೆ ತೀರಿಸಿದ್ದಕ್ಕೆ ಎಸ್ ಐ ಅಮಾನತು | ಇವರು ಹರಕೆ ತೀರಿಸಿದ್ದು ಹೇಗೆ ಗೊತ್ತಾ? - Mahanayaka

ದೇವಿಯ ಹರಕೆ ತೀರಿಸಿದ್ದಕ್ಕೆ ಎಸ್ ಐ ಅಮಾನತು | ಇವರು ಹರಕೆ ತೀರಿಸಿದ್ದು ಹೇಗೆ ಗೊತ್ತಾ?

28/02/2021


Provided by

ಜೈಪುರ: ದೇವರಿಗೆ ಹರಕೆ ತೀರಿಸಿದ್ದಕ್ಕಾಗಿ ಎಸ್ ಐ ಒಬ್ಬರು ಕೆಲಸ ಕಳೆದುಕೊಂಡ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನಡೆದಿದ್ದು,  ದೇವರಿಗೆ ಹರಕೆಯಾಗಿ ಮೇಕೆಯನ್ನು ಎಸ್ ಐ ಬಲಿ ಕೊಟ್ಟದ್ದಕ್ಕೆ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಭನ್ವರ್ ಸಿಂಗ್ ಎಂಬವರು ಅಮಾನತುಗೊಂಡವರಾಗಿದ್ದು, ತಮ್ಮ ಮನೆಯಲ್ಲಿ ದೇವಿಗೆ ಮೇಕೆಯನ್ನು ಅವರು ಬಲಿ ನೀಡಿದ್ದಾರೆ.  ಇವರು ಮೇಕೆಯನ್ನು ಬಲಿ ನೀಡುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ಇದರ ವಿರುದ್ಧ ಪ್ರಾಣಿ ದಯಾಸಂಘ ಆಕ್ರೋಶ ವ್ಯಕ್ತಪಡಿಸಿತ್ತು.

ಈ ಘಟನೆ ಫೆ.19 ನಡೆದಿದ್ದು,  ಆ ದಿನ ದೇವರ ಕಾರ್ಯಕ್ರಮಕ್ಕೆಂದು ಭನ್ವಾರಿ ಸಿಂಗ್ ರಜೆಯ ಮೇಲೆ ತೆರಳಿದ್ದರು. ಕಾರ್ಯಕ್ರಮದಲ್ಲಿ ಮೇಕೆಯ ಕತ್ತನ್ನು ಕಡಿದುರುಳಿಸುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಭನ್ವಾರಿ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು,  ಕೋಟಾ ಗ್ರಾಮೀಣ ಪೊಲೀಸ್ ಠಾಣೆಯ ವರಿಷ್ಠಾಧಿಕಾರಿ ಶರದ್ ಚೌದ್ರಿಯಾ ಹೇಳಿದ್ದಾರೆ. ಇನ್ನೂ ಈ ಘಟನೆಗೆ ಮಿಶ್ರ ಪ್ರತಿಕ್ರಿಯೆಯೂ ವ್ಯಕ್ತವಾಗಿದ್ದು, ಮೇಕೆಯನ್ನು ಕಡಿಯದೇ ಹಾಗೆಯೇ ತಿನ್ನುವುದು ಹೇಗೆ ಎಂದು ಪ್ರಾಣಿ ದಯಾ ಸಂಘದವರು ತಿಳಿಸಬೇಕು ಎಂದೂ ಕೆಲವು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

 

ಇತ್ತೀಚಿನ ಸುದ್ದಿ