ನೆಲ್ಯಾಡಿ: ಪರಿಶಿಷ್ಟ ಜಾತಿ, ಪಂಗಡದ 30 ಕುಟುಂಬಗಳಿಗೆ ಡಿನ್ನರ್ ಸೆಟ್ ವಿತರಣೆ
ನೆಲ್ಯಾಡಿ: ಪರಿಶಿಷ್ಟ ಜಾತಿ/ಪಂಗಡದವರ 25% ನಿಧಿಯಿಂದ 30 ಕುಟುಂಬಗಳಿಗೆ ನೆಲ್ಯಾಡಿ ಗಾಂಧಿ ಮೈದಾನದ ಗೆಳೆಯರ ಬಳಗ ರಂಗ ವೇದಿಕೆಯಲ್ಲಿ ಡಿನ್ನರ್ ಸೆಟ್ ವಿತರಣೆ ಶನಿವಾರ ಮಾಡಲಾಯಿತು.
2ನೇ ವಾರ್ಡಿನ ಪಂಚಾಯತ್ ಸದಸ್ಯರಾದ ರೇಷ್ಮಾ ಶಶಿ ಮತ್ತು ಇಕ್ಬಾಲ್ ಇವರ ಉಸ್ತುವಾರಿಯಲ್ಲಿ ಈ ಸಭೆಯನ್ನು ನಡೆಸಲಾಯಿತು.
ವೇದಿಕೆಯಲ್ಲಿ ದಲಿತ್ ಸೇವಾ ಸಮಿತಿಯ ಜಿಲ್ಲಾ ಸ್ಥಾಪಕಾಧ್ಯಕ್ಷರಾದ ಸೇಸಪ್ಪ ಬೆದ್ರಕಾಡುರವರು ಪ್ರಧಾನ ಭಾಷಣ ಮಾಡಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚೇತನ ಫಲಾನುಭವಿಗಳಿಗೆ ಶುಭ ಹಾರೈಸಿದರು. ಹಿರಿಯ ದಲಿತ ಮುಖಂಡರಾದ ಕೆ ಪಿ.ಆನಂದ ಪಡುಬೆಟ್ಟು ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಸದಸ್ಯರಾದ ಇಕ್ಬಾಲ್ ವಹಿಸಿದ್ದರು. ಪಂಚಾಯತ್ ಸದಸ್ಯೆ ರೇಷ್ಮಾಶಶಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಲ್ಲಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka