ಒಳಗಿಂದ ನಮ್ಮಲ್ಲಿ ಹಿಂದುತ್ವವಿದೆ: ಡಿ.ಕೆ.ಶಿವಕುಮಾರ್ - Mahanayaka
10:56 PM Thursday 23 - October 2025

ಒಳಗಿಂದ ನಮ್ಮಲ್ಲಿ ಹಿಂದುತ್ವವಿದೆ: ಡಿ.ಕೆ.ಶಿವಕುಮಾರ್

dk shivakumar
19/12/2022

ಬೆಳಗಾವಿ: ಹಿಂದೂಗಳಾಗಿ ಹುಟ್ಟಿದ ನಾವು ಹಿಂದೂಗಳಾಗಿಯೇ ಸಾಯುತ್ತೇವೆ. ಬಿಜೆಪಿಯವರದ್ದು ನಾಟಕ. ಒಳಗಿಂದ ನಮ್ಮಲ್ಲಿ ಹಿಂದುತ್ವವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುವರ್ಣಸೌಧದ ಮುಂಭಾಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಗಾಂಧಿ ಹಾಗೂ ಅಂಬೇಡ್ಕರ್ ಸೇರಿದಂತೆ ಮಹನೀಯರ ಫೋಟೋ ಹಾಕ್ತೀವಿ ಅಂತ ಸ್ಪೀಕರ್ ಹೇಳಿದರು. ಆದ್ರೆ ಇಲ್ಲಿ ಬಂದ ಬಳಿಕ ಸಾವರ್ಕರ್ ಫೋಟೋ ಹಾಕುವ ವಿಚಾರ ತಿಳಿಯಿತು. ಸಾವರ್ಕರ್ ವಿವಾದಿತ ವ್ಯಕ್ತಿ ಅಂತ ಎಲ್ಲರಿಗೂ ಗೊತ್ತು ಎಂದು ಅವರು ಇದೇ ವೇಳೆ ಹೇಳಿದರು.

ಫೋಟೋ ವಿಚಾರವಾಗಿ ನನಗೆ ಗೊತ್ತೇ ಇಲ್ಲ ಎಂದು ಸಿಎಂ ಹೇಳಿದ್ರು, ಅವರು ಸುಳ್ಳಿನ ರಾಜ. ಸ್ವಾತಂತ್ರ್ಯಕ್ಕೆ ಸಾವರ್ಕರ್ ಕೊಡುಗೆ ಇಲ್ಲ. ಅವರು ತಪ್ಪು ಒಪ್ಪಿಕೊಂಡು ಪತ್ರ ಬರೆದುಕೊಟ್ಟಿದ್ದರು, ಬ್ರಿಟೀಷರ ಜೊತೆಗೆ ಕೈ ಜೋಡಿಸಿದ್ದರು  ಎಂದರು.

ಕಮಿಷನ್, ಹಗರಣ, ಮತದಾರರ ಪಟ್ಟಿ ಹಗರಣ ವಿಚಾರ ಚರ್ಚೆಯಾಗಬಾರದು ಅನ್ನೋ ಕಾರಣಕ್ಕೆ ಈ ವಿವಾದವನ್ನು ಬಿಜೆಪಿಯವರು ತಂದಿಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ