ನಮ್ದೇ ಊರಲ್ಲಿ ಓಡಾಡೋಕೆ ದುಡ್ಡು ಕೊಡ್ಬೇಕಾ?: ಟೋಲ್ ಗೇಟ್ ವಿರುದ್ಧ ರೊಚ್ಚಿಗೆದ್ದ ಜನ
ಚಿಕ್ಕಮಗಳೂರು: ಕಡೂರು ತಾಲೂಕಿನ ಲಿಂಗ್ಲಾಪುರ ಟೋಲ್ ಬಳಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ರಸ್ತೆ ಪೂರ್ಣವಾಗದೇ ಟೋಲ್ ಸಂಗ್ರಹ ಮಾಡಲಾಗುತ್ತಿದೆ, ಅಲ್ಲದೇ ನಮ್ಮ ಊರಿನಲ್ಲಿ ಓಡಾಡ ಬೇಕಾದ್ರೆ ಹಣ ಕೊಟ್ಟು ಓಡಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಜಮೀನು-ಮಣ್ಣು ಕೊಟ್ಟು ಓಡಾಡೋಕೆ ದುಡ್ಡೂ ಕೊಡ್ಬೇಕು, ರಸ್ತೆ ಪೂರ್ಣವಾಗದೇ ಟೋಲ್ ಸಂಗ್ರಹ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಸ್ಥಳೀಯರ ಓಡಾಟಕ್ಕೆ ಸರ್ವಿಸ್ ರಸ್ತೆ ನಿರ್ಮಿಸುವಂತೆ ಒತ್ತಾಯ ಮಾಡಿದರು.
ಸರ್ವಿಸ್ ರಸ್ತೆ ಇದ್ರೆ ನಾವು ಹೈವೆಗೆ ಬರೋದೇ ಇಲ್ಲ, ನಮ್ದೇ ಊರಲ್ಲಿ ನಾವೇ ದುಡ್ಡು ಕೊಡ್ಬೇಕಾ? ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ.
ಸ್ಥಳೀಯರಿಂದಲೂ ಟೋಲ್ ಸಂಗ್ರಹದ ಆರೋಪ ಕೇಳಿ ಬಂದಿದ್ದು, ನಿತ್ಯ ಹೊಲ–ಗದ್ದೆ–ತೋಟಗಳಿಗೆ ಹೋಗುವಾಗೆಲ್ಲಾ ಟೋಲ್ ಕೊಡೋಕೆ ಆಗುತ್ತಾ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಗಲಾಟೆ ಮಾಡೋ ಸಿಬ್ಬಂದಿ ವಿರುದ್ಧ ಸಿಡಿದೆದ್ದ ಜನರು ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 206ರಲ್ಲಿರುವ ಟೋಲ್ ಬಳಿ ನಿತ್ಯ ಗಲಾಟೆ ಸೃಷ್ಟಿಯಾಗುತ್ತಿದೆ. ಸ್ಥಳೀಯರ ಮನವೊಲಿಸಲು ಕಡೂರು ಪೊಲೀಸರ ಹರಸಾಹಸ ಪಡುವಂತಾಗಿದೆ.
ಸ್ಥಳೀಯರಿಂದ ಟೋಲ್ ಸಂಗ್ರಹಕ್ಕೆ ಮುಂದಾದ್ರೆ ರಸ್ತೆ ಬಂದ್ ಮಾಡಿ, ಪ್ರತಿಭಟನೆ ನಡೆಸ ಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth