ಇಸ್ರೇಲ್ ಗೆ ಶಸ್ತ್ರಾಸ್ತ್ರ ನೀಡಬೇಡಿ: ಅಮೆರಿಕಾದ ಎಂಟು ಮಂದಿ ಸಂಸದರಿಂದ ಆಗ್ರಹ - Mahanayaka

ಇಸ್ರೇಲ್ ಗೆ ಶಸ್ತ್ರಾಸ್ತ್ರ ನೀಡಬೇಡಿ: ಅಮೆರಿಕಾದ ಎಂಟು ಮಂದಿ ಸಂಸದರಿಂದ ಆಗ್ರಹ

13/03/2024


Provided by

ಇಸ್ರೇಲ್ ಗೆ ಶಸ್ತ್ರಾಸ್ತ್ರ ನೀಡುವುದನ್ನು ನಿಲ್ಲಿಸಬೇಕು ಎಂದು ಅಮೆರಿಕಾದ ಎಂಟು ಮಂದಿ ಸಂಸದರು ಅಧ್ಯಕ್ಷ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಗಾಝಾದ ನಿರಾಶ್ರಿತರಿಗೆ ಆಹಾರ ಮತ್ತಿತರ ಯಾವುದೇ ಸೌಲಭ್ಯವನ್ನು ತಲುಪುವುದಕ್ಕೆ ಇಸ್ರೇಲ್ ಅಡ್ಡಿ ಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಗೆ ಶಸ್ತ್ರಾಸ್ತ್ರ ಸರಬರಾಜು ನಿಲ್ಲಿಸಬೇಕು ಎಂದವರು ಆಗ್ರಹಿಸಿದ್ದಾರೆ.

ಅಮೆರಿಕಾದ ಮಾನವೀಯ ಕಾರ್ಯಕ್ರಮಗಳನ್ನು ಇಸ್ರೇಲ್ ತಡೆಯುತ್ತಿದೆ. ಹೀಗಿರುವಾಗ ಅದಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಎಷ್ಟು ಸರಿ..? ಗಾಝಾದ ಸಂತ್ರಸ್ತರಿಗೆ ಸರಿಯಾಗಿ ಮಾನವೀಯ ನೆರವು ತಲುಪುವಂತೆ ಮಾಡಬೇಕು ಎಂದು ಇಸ್ರೇಲ್ ಗೆ ಅಮೆರಿಕ ತಾಕೀತ್ತು ಮಾಡಬೇಕು. ಗಾಝಾದ ಮಾನವೀಯ ಬಿಕ್ಕಟ್ಟು ಜಗತ್ತಿನಲ್ಲೇ ಅತ್ಯಂತ ಆಘಾತಕಾರಿ ಬೆಳವಣಿಗೆ ಎಂದು ಈ ಸಂಸದರು ಹೇಳಿದ್ದಾರೆ.

ಶೀಘ್ರದಲ್ಲಿ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ಬೈಡನ್ ಅವರು ಭಾರಿ ಸವಾಲಿಗೆ ಗುರಿಯಾಗಿದ್ದಾರೆ. ರಮಝಾನ್ ಗಿಂತ ಮೊದಲೇ ಗಾಝಾದಲ್ಲಿ ಯುದ್ಧವಿರಾಮ ನಡೆಯಲಿದೆ ಎಂದು ಬೈಡನ್ ಘೋಷಿಸಿದ್ದರು. ಆದರೆ ಈವರೆಗೂ ಅದನ್ನು ಜಾರಿ ಮಾಡಲು ಅವರಿಂದ ಸಾಧ್ಯವಾಗಿಲ್ಲ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ