ವಿಜ್ಞಾನವನ್ನು ನಂಬದ  ಆರೆಸ್ಸೆಸ್ ನಾಯಕ  ಗೋಳವಲ್ಕರ್ ಹೆಸರು ವಿಜ್ಞಾನ ಕೇಂದ್ರಕ್ಕಿಟ್ಟ ಕೇಂದ್ರ ಸರ್ಕಾರ | ವ್ಯಾಪಕ ಆಕ್ರೋಶ - Mahanayaka

ವಿಜ್ಞಾನವನ್ನು ನಂಬದ  ಆರೆಸ್ಸೆಸ್ ನಾಯಕ  ಗೋಳವಲ್ಕರ್ ಹೆಸರು ವಿಜ್ಞಾನ ಕೇಂದ್ರಕ್ಕಿಟ್ಟ ಕೇಂದ್ರ ಸರ್ಕಾರ | ವ್ಯಾಪಕ ಆಕ್ರೋಶ

06/12/2020

ತಿರುವನಂತಪುರಂ: ಕೇರಳದದಲ್ಲಿ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರದ  ಎರಡನೇ ಕ್ಯಾಂಪಸ್ ಗೆ ಆರೆಸ್ಸೆಸ್ ಸರಸಂಚಾಲಕ ಗೋಳವಲ್ಕರ್ ಅವರ ಹೆಸರು ನಾಮಕರಣ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


Provided by

ಕೇರಳದ ಆರ್ ಜಿಸಿಬಿಯ ಎರಡನೇ ಕ್ಯಾಂಪಸ್ ಗೆ “ಶ್ರೀ ಗುರೂಜಿ ಮಾಧವ್ ಸದಾಶಿವ್ ಗೋಳವಲ್ಕರ್ ಕ್ಯಾನ್ಸರ್ ಮತ್ತು ವೈರಲ್ ಸೋಂಕು ಸಂಕೀರ್ಣ ರೋಗದ ರಾಷ್ಟ್ರೀಯ ಕೇಂದ್ರ ಎಂದು ನಾಮಕರಣ ಮಾಡುವುದಕ್ಕೆ ಉದ್ದೇಶಿಸಲಾಗಿದೆ ಎಂದು ವರದಿಯಾಗಿದೆ.

ಗೋಳವಲ್ಕರ್ ಅವರು ವಿಜ್ಞಾನವನ್ನು ನಂಬದವರು, ವಿಜ್ಞಾನಕ್ಕಿಂತಲೂ ಧರ್ಮ ಶ್ರೇಷ್ಠ ಎಂದು ಹೇಳಿದ್ದವರು. ಅಂತಹವರ ಹೆಸರನ್ನು ಹೇಗೆ ವಿಜ್ಞಾನ ಕೇಂದ್ರಕ್ಕೆ ಇಡುತ್ತೀರಿ ಎಂದು  ಕೇಂದ್ರ ಸರ್ಕಾರವನ್ನು ಆಡಳಿತ ಪಕ್ಷ ಸಿಪಿಐ-ಎಂ ಹಾಗೂ ಕಾಂಗ್ರೆಸ್ ಪ್ರಶ್ನಿಸಿದೆ.

ಈ ಬಗ್ಗೆ ತಿರುವನಂತಪುರಂ ಸಂಸದ  ಶಿಶಿ ತರೂರ್ ಪ್ರಶ್ನಿಸಿ,  ಮಾಜಿ ಪ್ರಧಾನಿ ರಾಜೀವ್ ಗಾಂಧಿ ವೈಜ್ಞಾನಿಕ ನಾವೀನ್ಯತೆಗೆ ಪ್ರೇರಣೆ ನೀಡಿ, ಅನುದಾನವನ್ನೂ ಘೋಷಿಸಿದ್ದರು. ಇದೇ ರೀತಿ ವೈಜ್ಞಾನಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದವರ್ಯಾರೂ ಬಿಜೆಪಿಯಲ್ಲಿಲ್ಲವೆ? 1966 ರಲ್ಲಿ ವಿಹೆಚ್ ಪಿ ಸಭೆಯಲ್ಲಿ ಧರ್ಮ ಶ್ರೇಷ್ಠತೆಯನ್ನು ವಿಜ್ಞಾನಕ್ಕಿಂತ ಮಿಗಿಲಾದದ್ದು ಎಂದು ಹೇಳಿದ್ದ, ಹಿಟ್ಲರ್ ಅಭಿಮಾನಿಯಾಗಿದ್ದ ಗೋಳ್ವಲ್ಕರ್ ಅವರನ್ನು ಭಾರತ ಸರ್ಕಾರ ಸ್ಮರಿಸಬೇಕೆ? ಕೋಮುವಾದದ ಕಾಯಿಲೆ ಹರಡುವುದು ಬಿಟ್ಟು ಗೋಳವಲ್ಕರ್  ಅವರ ಬೇರೆ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ.

ಸಿಪಿಐ-ಎಂ ಪಾಲಿಟ್ ಬ್ಯೂರೋ ಸದಸ್ಯ, ಕೇರಳದ ಮಾಜಿ ಸಚಿವ ಎಂಎ ಬೇಬಿ ಮಾತನಾಡಿ, ಈ ಬೆಳವಣಿಗೆ ದುರದೃಷ್ಟಕರ, ಕ್ರೂರ, ಕೇರಳ ಸಮಾಜವನ್ನು ಒಡೆಯುವುದಕ್ಕಾಗಿ ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಕೇರಳದ ಜನತೆ ಇದನ್ನು ಬಲವಾಗಿ ವಿರೋಧಿಸಬೇಕು ಎಂದು ಕರೆ ನೀಡಿದ್ದಾರೆ.

 

ಇತ್ತೀಚಿನ ಸುದ್ದಿ