ವಾಟ್ಸ್ಆ್ಯಪ್‌ನಲ್ಲಿ ಇತಿಹಾಸ ಓದಬೇಡಿ: ಔರಂಗಜೇಬ್ ಸಮಾಧಿ ಬಗ್ಗೆ ರಾಜ್ ಠಾಕ್ರೆ ವಾಗ್ದಾಳಿ

ಔರಂಗಜೇಬ್ ಸಮಾಧಿಯ ಬಗ್ಗೆ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಪ್ರಯತ್ನಗಳನ್ನು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಭಾನುವಾರ ಖಂಡಿಸಿದ್ದಾರೆ. ಇತಿಹಾಸವನ್ನು ಜಾತಿ ಮತ್ತು ಧರ್ಮದ ದೃಷ್ಟಿಕೋನದಿಂದ ನೋಡದಂತೆ ಜನರನ್ನು ಒತ್ತಾಯಿಸಿದ್ದಾರೆ. ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ತಮ್ಮ ವಾರ್ಷಿಕ ಗುಡಿ ಪಾಡ್ವಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ದಾರಿತಪ್ಪಿಸುವ ಐತಿಹಾಸಿಕ ನಿರೂಪಣೆಗಳು ಮತ್ತು ವಾಟ್ಸಾಪ್ ಫಾರ್ವರ್ಡ್ ಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಇತಿಹಾಸವನ್ನು ಸಾಮಾಜಿಕ ಮಾಧ್ಯಮಗಳಿಗಿಂತ ವಿಶ್ವಾಸಾರ್ಹ ಮೂಲಗಳಿಂದ ಅಧ್ಯಯನ ಮಾಡಬೇಕು ಎಂದು ಪ್ರತಿಪಾದಿಸಿದರು.
ಛತ್ರಪತಿ ಸಂಭಾಜಿನಗರ ಜಿಲ್ಲೆಯ ಔರಂಗಜೇಬ್ ಸಮಾಧಿಯ ಬಗ್ಗೆ ವಿವಾದವನ್ನು ಹುಟ್ಟುಹಾಕುವ ರಾಜಕೀಯ ಪ್ರಯತ್ನಗಳನ್ನು ಅವರು ಟೀಕಿಸಿದರು. ಇದು ನಾಗ್ಪುರದಲ್ಲಿ ಉದ್ವಿಗ್ನತೆ ಮತ್ತು ಹಿಂಸಾಚಾರಕ್ಕೆ ಕಾರಣವಾಗಿದೆ.
ಇಂತಹ ಚರ್ಚೆಗಳ ಪ್ರಸ್ತುತತೆಯನ್ನು ಪ್ರಶ್ನಿಸಿದ ಠಾಕ್ರೆ, “ನಾವು ಜಲಮೂಲಗಳು ಮತ್ತು ಮರಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ಆದರೆ ನಾವು ಔರಂಗಜೇಬ್ ಸಮಾಧಿಯ ಬಗ್ಗೆ ಚಿಂತಿತರಾಗಿದ್ದೇವೆ” ಎಂದು ಹೇಳಿದರು. ವಿಭಜಕ ರಾಜಕೀಯಕ್ಕೆ ಬಲಿಯಾಗುವುದರ ವಿರುದ್ಧ ಎಚ್ಚರಿಕೆ ನೀಡಿದ ಅವರು, “ಇತಿಹಾಸದ ಹೆಸರಿನಲ್ಲಿ ಜನರನ್ನು ಹೋರಾಡುವಂತೆ ಮಾಡಲಾಗುತ್ತಿದೆ ಮತ್ತು ರಾಜಕಾರಣಿಗಳು ಸಂಘರ್ಷವನ್ನು ಉತ್ತೇಜಿಸಲು ಈ ಸಮಸ್ಯೆಗಳನ್ನು ಬಳಸಿಕೊಳ್ಳುತ್ತಿದ್ದಾರೆ” ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj