‘ಕೈ’ ಬಿಟ್ಟು ‘ಕಮಲ’ ಅಪ್ಪಿದವರಿಗೆ ಬಿಗ್ ಟೆನ್ಸನ್: ಮೋಸ ಮಾಡಿದವ್ರಿಗೆ ಬಾಗಿಲು ಶಾಶ್ವತವಾಗಿ ಮುಚ್ಚಿರಲಿದೆ ಎಂದ ಕಾಂಗ್ರೆಸ್ ನಾಯಕ

ಕಾಂಗ್ರೆಸ್ ನಿಂದ ಬಿಜೆಪಿಗೆ ಜಂಪ್ ಮಾಡಿರುವ ನಾಯಕರಿಗೆ ಕಾಂಗ್ರೆಸ್ ರೆಡ್ ಸಿಗ್ನಲ್ ರವಾನಿಸಿದೆ. ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದ ನಾಯಕರಿಗೆ ಕಾಂಗ್ರೆಸ್ಸಿನ ಬಾಗಿಲು ಶಾಶ್ವತವಾಗಿ ಮುಚ್ಚಿರಲಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರ ಹೇಳಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿಯಿಂದ ಮರಳಿ ಕಾಂಗ್ರೆಸ್ ಗೆ ಬರಬಹುದು ಎಂದು ಯಾರಾದರೂ ನಂಬಿದ್ರೆ ಅವರು ಭ್ರಮೆಯಲ್ಲಿದ್ದಾರೆ ಎಂದು ಅರ್ಥ ಎಂದು ಕೂಡ ಖೇರ ಖಾರವಾಗಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೋಲಿನ ಭೀತಿಯಲ್ಲಿದ್ದಾರೆ. ಎನ್ ಡಿ ಏ ಸೋಲನುಭವಿಸಿ ಇಂಡಿಯಾ ಕೂಟ ಅಧಿಕಾರಕ್ಕೆ ಬರಲಿದೆ ಮತ್ತು ತಾನು ಮಾಡಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಯಲಿದೆ ಎಂಬ ಭೀತಿ ಮೋದಿಗೆ ಶುರುವಾಗಿದೆ. ಮೋದಿಯವರ ಎಲ್ಲಾ ಅಕ್ರಮ ನಡೆಗಳಿಗೂ ಮೌನ ಸಮ್ಮತಿ ನೀಡಿರುವ ಅಧಿಕಾರಿಗಳ ವಿರುದ್ಧವು ಕ್ರಮ ಜರುಗಿಸಲಾಗುವುದು. ನಮ್ಮಿಂದ ಬಿಜೆಪಿಗೆ ಜಂಪಾದವರಿಗೆ ಈಗ ಭಯ ಆರಂಭವಾಗಿದೆ. ಆದರೆ ಅವರಿಗೆ ನಮ್ಮ ಬಾಗಿಲು ಮುಚ್ಚಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ಸಿಗೆ ಬರಬಹುದು ಎಂದವರು ಆಲೋಚಿಸಿದ್ದರೆ ಅವರು ಮೂರ್ಖರಾಗಿದ್ದಾರೆ ಎಂದು ಪವನ್ ಕೇರ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth