ಅಮೆರಿಕ ಆರೋಗ್ಯ ಸಚಿವರಾಗಿ ಕರ್ನಾಟಕ ಮೂಲದ ಡಾ.ವಿವೇಕ್ ಮೂರ್ತಿ ಆಯ್ಕೆ? - Mahanayaka
10:38 AM Tuesday 20 - January 2026

ಅಮೆರಿಕ ಆರೋಗ್ಯ ಸಚಿವರಾಗಿ ಕರ್ನಾಟಕ ಮೂಲದ ಡಾ.ವಿವೇಕ್ ಮೂರ್ತಿ ಆಯ್ಕೆ?

19/11/2020

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬಿಡನ್ ಅವರ ಸಂಪುಟಕ್ಕೆ ಕರ್ನಾಟಕದ ಮಂಡ್ಯ ಮೂಲದ ಕನ್ನಡಿಗ ಡಾ.ವಿವೇಕ್ ಮೂರ್ತಿ ಅವರು ಸೇರ್ಪಡೆಗೊಳ್ಳುವ ಸಾಧ್ಯತೆಗಳಿದ್ದು, ಅವರಿಗೆ ಉನ್ನತ ಸ್ಥಾನ ದೊರೆಯುವ ಸಾಧ್ಯತೆ ಕಂಡು ಬಂದಿದೆ.

ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಹುದ್ದೆಗೆ ನೇಮಕವಾಗಬಹುದು ಡಾ.ವಿವೇಕ್ ಮೂರ್ತಿ ಅವರು ಆಯ್ಕೆಯಾಗಬಹುದು ಎಂದು ಹೇಳಲಾಗುತ್ತಿದೆ. ಅದೇ ರೀತಿ ಭಾರತೀಯ ಮೂಲದ ಪ್ರಾಧ್ಯಾಪಕ ಡಾ. ಅರುಣ್ ಮಜುಮದಾರ್ ಅವರನ್ನು ಇಂಧನ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವ ಸಾಧ್ಯತೆ ಇದೆ ಎಂದು ಅಮೆರಿಕ ಮೂಲದ ಪತ್ರಿಕೆಯೊಂದರಲ್ಲಿ ಹೇಳಲಾಗಿದೆ.

ಕೊರೋನಾ ನಿಯಂತ್ರಣಕ್ಕಾಗಿ ರಚಿಸಲಾದ ಸಲಹಾ ಪಡೆಯಲ್ಲಿ ವಿವೇಕ್ ಮೂರ್ತಿ ಕೂಡ ಇದ್ದಾರೆ. ಅವರು ಬರಾಕ್ ಒಬಾಮ ಅವರ ಅವಧಿಯಲ್ಲಿ ಅಮೆರಿಕದ ಸರ್ಜನ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಇತ್ತೀಚಿನ ಸುದ್ದಿ