ಯಾವುದೇ ದಾಖಲೆಗಳಿಲ್ಲದೇ ವ್ಯಕ್ತಿಯ ಖಾತೆಯಿಂದ 40 ಸಾವಿರ ವಿತ್ ಡ್ರಾ ಮಾಡಿದ ಅಪರಿಚಿತ ವ್ಯಕ್ತಿಗಳು
ಉಡುಪಿ: ಎಟಿಎಂ ಕಾರ್ಡ್ ಇಲ್ಲದೇ, ಯಾವುದೇ ಬ್ಯಾಂಕ್ ದಾಖಲೆ ಕೂಡ ಇಲ್ಲದೇ ವ್ಯಕ್ತಿಯೊಬ್ಬರ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ಹಣ ವಿತ್ ಡ್ರಾ ಮಾಡಿರುವ ಆತಂಕಕಾರರಿ ಘಟನೆ ನಡೆದಿದೆ.
ಇದೊಂದು ವಿಚಿತ್ರ ಪ್ರಕರಣವಾಗಿದೆ. ಉಡುಪಿ ಮೂಲದ ಮೂಡುಬೆಟ್ಟು ನಿವಾಸಿ ಸದಾನಂದ ಭಂಡಾರಿ(62) ಅವರ ಕೆನರಾ ಬ್ಯಾಂಕ್ ಖಾತೆಯಿಂದ ಬೆಂಗಳೂರಿನ ಅಲಂಕಾರ್ ಫ್ಲಾಜಾ ಎಂಬಲ್ಲಿ ಹಣ ವಿತ್ ಡ್ರಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ರೂ.10 ಸಾವಿರದಂತೆ ಒಟ್ಟು 40 ಸಾವಿರ ರೂಪಾಯಿಗಳನ್ನು ವಿತ್ ಡ್ರಾ ಮಾಡಲಾಗಿದೆ. ಸದಾನಂದ ಭಂಡಾರಿ ಅವರ ಮೊಬೈಲ್ ಗೆ ಬಂದ ಸಂದೇಶದ ಆಧಾರದಲ್ಲಿ ಅವರ ಖಾತೆಯಿಂದ ಯಾರೋ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಭಂಡಾರಿ ಅವರು ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಶೋಧ ನಡೆಯುತ್ತಿದೆ.
Disclaimer:
www.mahanayaka.in ಅಂತರ್ಜಾಲ ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿಗಳಲ್ಲಿ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗುವಂತಹ ಅಥವಾ ನೋವುಂಟಾಗುವಂತಹ ಅಥವಾ ನಿಮಗೆ ಆಕ್ಷೇಪಾರ್ಹ ಎನಿಸಿದಂತಹ ಅಂಶಗಳ ಬಗ್ಗೆ ಓದುಗರು 9686872149 ನಂಬರ್ ಗೆ ಸುದ್ದಿಯ ಲಿಂಕ್ ಸಹಿತ ನಿಮ್ಮ ದೂರು ಸಲಹೆಗಳನ್ನು ವಾಟ್ಸಾಪ್ ಮಾಡಬಹುದು. ಅಥವಾ ಕರೆ ಮಾಡಬಹುದು. ನಿಮ್ಮ ದೂರನ್ನು ಪರಿಶೀಲಿಸಿ, ಅಂತಹ ಆಕ್ಷೇಪಾರ್ಹ ಅಂಶಗಳನ್ನು ತೆಗೆದು ಹಾಕಲು ಮಾಧ್ಯಮವು ಬದ್ಧವಾಗಿದೆ.