ಬೆಂಚ್ ನ ಸೆರೆಯಲ್ಲಿ ತಲೆ ಸಿಲುಕಿ ಕುಡುಕನ ಒದ್ದಾಟ: ಕುಡುಕನ ಅವಾಂತರಕ್ಕೆ ಪೊಲೀಸರು ಸುಸ್ತು! - Mahanayaka

ಬೆಂಚ್ ನ ಸೆರೆಯಲ್ಲಿ ತಲೆ ಸಿಲುಕಿ ಕುಡುಕನ ಒದ್ದಾಟ: ಕುಡುಕನ ಅವಾಂತರಕ್ಕೆ ಪೊಲೀಸರು ಸುಸ್ತು!

kanpur
09/04/2024

ಕುಡಿತದ ಮತ್ತಿನಲ್ಲಿ ಕುಡುಕನೋರ್ವ ಪಾರ್ಕ್ ನ ಬೆಂಚ್ ನಲ್ಲಿ ಮಲಗಿದ್ದು,  ವೇಳೆ ಬೆಂಚ್ ನ ಸೆರೆಯಲ್ಲಿ ಕುತ್ತಿಗೆ ಸಿಲುಕಿದ ಘಟನೆ  ಕಾನ್ಪುರದ ರಾಮಲೀಲಾ ಪಾರ್ಕ್ ನಲ್ಲಿ ನಡೆದಿದೆ.

ಬೆಂಚ್ ನಲ್ಲಿ ಸಿಲುಕಿ ಒದ್ದಾಡಿದ ಕುಡುಕ ನೋವು ತಾಳಲಾರದೇ ಕೂಗಾಡಿದ್ದು, ಆತನ ಬೊಬ್ಬೆ ಕೇಳಿ ಸ್ಥಳದಲ್ಲಿ ಜನ ಜಮಾಯಿಸಿದ್ದಾರೆ.  ಕೊನೆಗೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೆಂಚ್ ನ ಸೆರೆಯಿಂದ ಕುಡುಕನನ್ನು ಬಿಡಿಸಿ ರಕ್ಷಿಸಿದ್ದಾರೆ. ಪೊಲೀಸರು ಕುಡುಕನನ್ನು ಬೆಂಚ್ ನಿಂದ ಎಳೆದು ರಕ್ಷಿಸುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವ್ಯಕ್ತಿಯ ಕುಡಿತದ ಮತ್ತಿನಲ್ಲಿ ಪಾರ್ಕ್ ನ ಬೆಂಚ್ ಮೇಲೆ ಮಲಗಿದ್ದನು ಆಕಸ್ಮಿಕವಾಗಿ ಸಿಮೆಂಟ್ ಬೆಂಚ್ ನ ಸೆರೆಗೆ ತಲೆ ಹಾಕಿದ್ದಾನೆ ಎನ್ನಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ