ಇನ್ನು ನಿಲ್ಲದ 'ಕಾಂತಾರ' ಕ್ರೇಜ್: ಕೋಲ್ಕತ್ತಾದಲ್ಲಿ ನವರಾತ್ರಿ ಸಂಭ್ರಮದ ವೇಳೆ ಕಾಣಿಸಿಕೊಂಡ ಕಾಂತಾರಾ ಥೀಮ್ ನಲ್ಲಿ ರಚನೆಯಾದ ವಿಗ್ರಹಗಳು - Mahanayaka
10:17 AM Saturday 23 - August 2025

ಇನ್ನು ನಿಲ್ಲದ ‘ಕಾಂತಾರ’ ಕ್ರೇಜ್: ಕೋಲ್ಕತ್ತಾದಲ್ಲಿ ನವರಾತ್ರಿ ಸಂಭ್ರಮದ ವೇಳೆ ಕಾಣಿಸಿಕೊಂಡ ಕಾಂತಾರಾ ಥೀಮ್ ನಲ್ಲಿ ರಚನೆಯಾದ ವಿಗ್ರಹಗಳು

19/10/2023


Provided by

ಹೊಂಬಾಳೆ ಫಿಲಂಸ್ ಕನ್ನಡ ಆಕ್ಷನ್-ಥ್ರಿಲ್ಲರ್ ‘ಕಾಂತಾರಾ’ ಭಾರತೀಯ ಚಿತ್ರರಂಗದ ಅತಿದೊಡ್ಡ ಬಾಕ್ಸಾಫೀಸ್ ಬ್ಲಾಕ್ ಬ್ಲಸ್ಟರ್ ಸಿನಿಮಾಗಳಲ್ಲಿ ಒಂದಾಗಿದೆ. ಈ ಚಿತ್ರವು ಸುಂದರ ಕಥೆ ಮತ್ತು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷವನ್ನು ಸುಂದರವಾಗಿ ಪರಿಹರಿಸಿದ್ದಕ್ಕಾಗಿ ಪ್ರೀತಿ ಮತ್ತು ಮೆಚ್ಚುಗೆಯನ್ನು ಪಡೆಯಿತು. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಅದರ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಮೊನ್ನೆ ಗಣಪತಿ ಹಬ್ಬದ ಸಮಯದಲ್ಲಿ ‘ಕಾಂತಾರಾ’ ಕ್ರೇಜ್ ಕಂಡುಬಂದಿದ್ರೆ ಈಗ ನವರಾತ್ರಿಯಲ್ಲಿ ಕಾಂತಾರ ಕ್ರೇಜ್ ಕಂಡುಬಂದಿದೆ. ದುರ್ಗಾ ವಿಗ್ರಹಗಳು ಕಾಂತಾರ ಥೀಮ್ ಮೇಲೆ ಅಲಂಕಾರಗೊಂಡಿದೆ.

ಹೌದು.
ಕಾಂತಾರಾ ಥೀಮ್ ನಲ್ಲಿ ಮೂಡಿಬಂದ ಗಣಪತಿ ಪೆಂಡಾಲ್ ಗಳು ದೊಡ್ಡ ಆಕರ್ಷಣೆಯಾಗಿತ್ತು. ಈ ಮಧ್ಯೆ ಕಾಂತಾರ ಗಣಪತಿ ವಿಗ್ರಹಗಳು ವಿರೋಧಕ್ಕೆ ಕಾರಣವಾಗಿದ್ದವು. ಇದೀಗ ನವರಾತ್ರಿ ಉತ್ಸವದಲ್ಲಿಯೂ ಕಾಂತಾರ ಕ್ರೇಜ್ ಕಂಡುಬಂದಿದೆ. ದೇಶದಲ್ಲಿ ಪ್ರಸ್ತುತ ನವರಾತ್ರಿ ಹಬ್ಬವನ್ನು ಆಚರಿಸುತ್ತಿದ್ದರೆ, ಕೋಲ್ಕತ್ತಾದಲ್ಲಿ ಸಂಪೂರ್ಣವಾಗಿ ಕಾಂತಾರ ಥೀಮ್‌ನಲ್ಲಿ ಅಲಂಕರಿಸಿದ ದುರ್ಗಾ ಪೆಂಡಾಲ್ ಮತ್ತು ವಿಗ್ರಹಗಳು ಕೋಲ್ಕತ್ತಾದಲ್ಲಿ ಕಂಡುಬಂದಿದೆ.

ಕೋಲ್ಕತ್ತಾದಲ್ಲಿ ಇದು ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.
‘ಕಾಂತಾರಾ’ 2022 ರಲ್ಲಿ ಬಿಡುಗಡೆಯಾಗಿ ರಾಷ್ಟ್ರ ಮತ್ತು ವಿದೇಶಗಳಲ್ಲಿ ಭಾರೀ ಪ್ರಚಾರ ಪಡೆದಿತ್ತು. ಈ ಚಿತ್ರವು ಹಿಂದಿ ಭಾಷೆಯಲ್ಲಿ 100 ಕೋಟಿಗಿಂತ ಹೆಚ್ಚಿನ ಗಳಿಕೆ ಕಂಡಿತ್ತು. ಇದಲ್ಲದೆ, ಚಿತ್ರಮಂದಿರಗಳಲ್ಲಿ ಚಲನಚಿತ್ರವನ್ನು ನೋಡಿದ ಪ್ರತಿಯೊಬ್ಬರಿಗೂ ಇದು ದೈವಿಕ ಅನುಭವ ನೀಡಿತ್ತು.

ಇತ್ತೀಚಿನ ಸುದ್ದಿ