ಪಿಎಸ್ ಐ ತಿರುಮಲೇಶ್  ಹಾಗೂ ತಂಡದಿಂದ ಭರ್ಜರಿ ಬೇಟೆ | ಮೂವರು ದ್ವಿಚಕ್ರವಾಹನ ಕಳ್ಳರ ಬಂಧನ  - Mahanayaka

ಪಿಎಸ್ ಐ ತಿರುಮಲೇಶ್  ಹಾಗೂ ತಂಡದಿಂದ ಭರ್ಜರಿ ಬೇಟೆ | ಮೂವರು ದ್ವಿಚಕ್ರವಾಹನ ಕಳ್ಳರ ಬಂಧನ 

12/11/2020

ಶಿವಮೊಗ್ಗ:  ಮೂವರು  ದ್ವಿಚಕ್ರವಾಹನ ಕಳ್ಳರನ್ನು ಮಂಗಳವಾರ ರಾತ್ರಿ 8 ಗಂಟೆಗೆ  ಪೊಲೀಸರು  ಶಿವಮೊಗ್ಗ ನಗರ ಸೂಳೆಬೈಲ್  ಗೋಪಾಲಿ ಮೈದಾನದಲ್ಲಿ ಬಂದಿಸಿದ್ದಾರೆ. ಬಂಧಿತರಿಂದ ಫಲ್ಸರ್ ಬೈಕ್ ಸೇರಿದಂತೆ ವಿವಿಧ ಕಂಪನಿಗಳ 11 ಬೈಕ್ ಗಳನ್ನು ವಶಪಡಿಸಿಕೊಂಡಿದ್ದು,  ಇವುಗಳ  ಮೌಲ್ಯ ಸುಮಾರು 3.44 ಲಕ್ಷ ರೂ ಅಂದಾಜಿಸಲಾಗಿದೆ.

tunga nagara police

ಜಿಲ್ಲಾ ವರಿಷ್ಠಾಧಿಕಾರಿಗಳಾದ ಕೆ,ಎಂ ಶಾಂತರಾಜ್ ,  ಹೆಚ್ಚುವರಿ ಪೋಲೀಸ್ ಅಧೀಕ್ಷಕರಾದ ಶೇಖರ್ ಟಿ ಹಾಗೂ ಶಿವಮೊಗ್ಗ ಪೋಲೀಸ್ ಉಪದೀಕ್ಷರಾದ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ ಖಚಿತ ಮಾಹಿತಿಯ ಮೇರೆಗೆ ವೃತ್ತ ನಿರೀಕ್ಷರಾದ  ಟಿ.ಸಂಜೀವ್ ಕುಮಾರ್ ತುಂಗಾನಗರ ಪೊಲೀಸ್ ಠಾಣೆಯ ಪಿಎಸ್ ಐ ತಿರುಮಲೇಶ್ ಜಿ, ಅವರ ನೇತೃತ್ವದಲ್ಲಿ  ಈ ಕಾರ್ಯಾಚರಣೆ ನಡೆಸಲಾಗಿದೆ

ತಬಾರಕ್ , ಸೈಯದ್ ಸುಭಾನ್, ಜುನೈದ್ ಆಲಿಯಾಸ್ ಜಿನ್ನು ಬಂಧಿತ ಆರೋಪಿಗಳಾಗಿದ್ದಾರೆ. ಇವರು ಶಿವಮೊಗ್ಗ ನಗರ ಸೇರಿದಂತೆ ಭದ್ರಾವತಿ ಹಾಗೂ ಕುಂಸಿ ಠಾಣಾ ವ್ಯಾಪ್ತಿಯ  ವಿವಿಧೆಡೆ ಬೈಕ್ ಗಳನ್ನು ಕದ್ದಿದ್ದಾರೆ. ಕಾರ್ಯಾಚರಣೆ ತಂಡದಲ್ಲಿದ್ದ  ನಾರಾಯಣ್ ಜಿ ಆರ್, ಎಎಸ್ ಐ, ಸಿಬ್ಬಂದಿಗಳಾದ ಸಯ್ಯದ್ ಇಮ್ರಾನ್ , ರಾಜು ಕೆ.ಆರ್., ಗುರುನಾಯ್ಕ್ ಆರ್. ,ಲಂಕೇಶ್ ಕುಮಾರ್  ಅವರನ್ನು  ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿಗಳಾದ ಕೆ.ಎಂ.ಶಾಂತರಾಜ್ ಹಾಗೂ ಹೆಚ್ಚುವರಿ ಪೊಲೀಸ್ ಅದೀಕ್ಷಕರಾದ ಶೇಖರ್ ಟಿ ಶ್ಲಾಘಿಸಿದ್ದಾರೆ.

ವರದಿ: ಕೋಗಲೂರು ಕುಮಾರ್

ಇತ್ತೀಚಿನ ಸುದ್ದಿ