ಬೀಚ್ ನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ದಾರುಣ ಸಾವು: ಓರ್ವ ನಾಪತ್ತೆ - Mahanayaka
9:09 AM Sunday 15 - September 2024

ಬೀಚ್ ನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ದಾರುಣ ಸಾವು: ಓರ್ವ ನಾಪತ್ತೆ

hude
25/09/2022

ಮಲ್ಪೆ: ಸಮುದ್ರದಲ್ಲಿ ಮುಳುಗಿ ಮಣಿಪಾಲದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು ಓರ್ವ ಸಮುದ್ರಪಾಲಾಗಿರುವ ಹೂಡೆ ಸಮೀಪದ ಬೀಚ್ ನಲ್ಲಿ ರವಿವಾರ ಸಂಜೆ ನಡೆದಿದೆ.

ಮೃತರನ್ನು ಬೆಂಗಳೂರು ಮೂಲದ ಮಣಿಪಾಲದ ವಿದ್ಯಾರ್ಥಿಗಳಾದ ನಿಶಾಂತ್(21) ಹಾಗೂ ಷಣ್ಮುಗ(21) ಎಂದು ಗುರುತಿಸಲಾಗಿದೆ. ಇನ್ನೋರ್ವ ವಿದ್ಯಾರ್ಥಿ ಶ್ರೀಕರ್(21) ಎಂಬವರು  ನಾಪತ್ತೆಯಾಗಿದ್ದಾರೆ.

ರಜೆಯ ಹಿನ್ನೆಲೆಯಲ್ಲಿ ಮಣಿಪಾಲದ ಸುಮಾರು 15 ಮಂದಿ ವಿದ್ಯಾರ್ಥಿ ಗಳು ಹೂಡೆ ಬೀಚ್ ಗೆ ಬಂದಿದ್ದು ನೀರಿನಲ್ಲಿ ಆಡುತ್ತಿದ್ದರು. ಈ ವೇಳೆ ಮೂವರು ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋದರು.


Provided by

ಅದರಲ್ಲಿ ಇಬ್ಬರನ್ನು ರಕ್ಷಿಸಿ ಮೇಲಕ್ಕೆ ತರಲಾಯಿತು. ತೀವ್ರವಾಗಿ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.  ನಾಪತ್ತೆಯಾದ  ವಿದ್ಯಾರ್ಥಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ