ಅಕ್ರಮ ಒತ್ತುವರಿ ತೆರವಿಗೆ ಎರಡನೇ ಬಲಿ: ಒತ್ತುವರಿ ತೆರವಿನಿಂದ ನೊಂದು ಸಾವಿಗೆ ಶರಣು
ಚಿಕ್ಕಮಗಳೂರು: ಅಕ್ರಮ ಒತ್ತುವರಿ ತೆರವಿಗೆ ಎರಡನೇ ಬಲಿಯಾಗಿದೆ. ಕೊಪ್ಪ ತಾಲೂಕಿನ ಮೇಗೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಒತ್ತುವರಿ ತೆರವಿನಿಂದ ನೊಂದು ವ್ಯಕ್ತಿಯೊಬ್ಬರು ಸಾವಿಗೆ ಶರಣಾಗಿದ್ದಾರೆ.
ಕರುಣಾಕರ್ (58) ನೇಣು ಬಿಗಿದುಕೊಂಡು ಸಾವಿಗೆ ಶರಣಾದವರಾಗಿದ್ದಾರೆ. ಬದುಕಿಗಾಗಿ ಅರ್ಧ ಎಕರೆ ಒತ್ತುವರಿ ಮಾಡಿದ್ದ ಕರುಣಾಕರ್, ಬ್ಯಾಂಕ್ ಹಾಗೂ ಸೊಸೈಟಿ ಜೊತೆ ಕೈ ಸಾಲ ಮಾಡಿಕೊಂಡಿದ್ದರು.
ಮಗಳ ಮದುವೆ ಹಾಗೂ ಸಾಲ ತೀರಿಸಲು ಜಮೀನಿನ ಮೇಲೆ ಅವಲಂಬಿಸಿದ್ದರು. ಒಂದು ತಿಂಗಳಿಂದ ಒತ್ತುವರಿ ತೆರವು ಭೂತ ಮಲೆನಾಡಿಗರನ್ನ ಕಿತ್ತು ತಿನ್ನುತ್ತಿದೆ. ಮಗಳ ಮದುವೆಯಾಗಿಲ್ಲ, ಸಾಲ ತೀರಿಸಲು ದಾರಿ ಇಲ್ಲ ಎಂದು ಸಾವಿನ ದಾರಿ ಹಿಡಿದಿದ್ದಾರೆ.
ಮನೆಯ ಬಳಿಯೇ ಮರಕ್ಕೆ ನೇಣು ಬಿಗಿದುಕೊಂಡು ಕರುಣಾಕರ್ ಸಾವಿಗೆ ಶರಣಾಗಿದ್ದಾರೆ. ಘಟನೆ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: