ಈಗ ಸಿಕ್ಕಿರೋದು ನಟ-ನಟಿ ಅಷ್ಟೆ, ಡೈರೆಕ್ಟರ್, ಪ್ರೊಡ್ಯೂಸರ್ ಮುಂದೆ ಸಿಗಲಿದ್ದಾರೆ | ರಮೇಶ್ ಜಾರಕಿಹೊಳಿ - Mahanayaka
6:43 PM Wednesday 27 - August 2025

ಈಗ ಸಿಕ್ಕಿರೋದು ನಟ-ನಟಿ ಅಷ್ಟೆ, ಡೈರೆಕ್ಟರ್, ಪ್ರೊಡ್ಯೂಸರ್ ಮುಂದೆ ಸಿಗಲಿದ್ದಾರೆ | ರಮೇಶ್ ಜಾರಕಿಹೊಳಿ

14/03/2021


Provided by

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ನಿನ್ನೆ ಅವರು ದೂರು ನೀಡಿದಂದಿನಿಂದ ಮತ್ತೆ ಚರ್ಚೆಗೆ ಬಂದಿದೆ. ನಿನ್ನೆ ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ರಮೇಶ್ ಜಾಕಿಹೊಳಿ, ರಮೇಶ್ ಜಾರಕಿಹೊಳಿ ಒಬ್ಬನೇ ವಿಕ್ಟಿಮ್ ಅಲ್ಲ, ಬೋಗಸ್ ಸಿಡಿ ತಂದು ಬ್ಲ್ಯಾಕ್ ಮೇಲೆ ಮಾಡಿದ್ರೆ ಎಲ್ಲರು ಕೂಡ ಮನೆಗೆ ಹೋಗಬೇಕಾಗುತ್ತದೆ ಎಂದು ಹೇಳಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಅರೆಸ್ಟ್ ಆಗಿರುವವರ ಬಗ್ಗೆ ಮಾಹಿತಿ ಇಲ್ಲ.  ಎಸ್ ಐಟಿಯಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದ ಅವರು, ನೂರಾರು ಕೋಟಿ ಖರ್ಚು ಮಾಡಿ ಈ ಷಡ್ಯಂತ್ರ ಮಾಡಲಾಗಿದೆ ಎಂದು ಹೇಳಿದರು.’

ಈ ಪ್ರಕರಣದಲ್ಲಿ 2+3+4 ಜನರು ಮುಖ್ಯವಾಗಿದ್ದಾರೆ. ಇನ್ನು ಉಳಿದವರು ಬಹಳಷ್ಟು ಮಂದಿ ಇದ್ದಾರೆ. ಈಗ ನಟ ಮತ್ತು ನಟಿ ಮಾತ್ರವೇ ಸಿಕ್ಕಿದ್ದಾರೆ. ಮುಂದೆ ಡೈರೆಕ್ಟರ್, ಪ್ರೊಡ್ಯೂಸರ್ ಸಿಗಲಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಇತ್ತೀಚಿನ ಸುದ್ದಿ