ಹೆಣ್ಣು ಮಕ್ಕಳ ಎದುರು ಬಟ್ಟೆ ಬಿಚ್ಚೋಕೆ ನಾವು ಹೇಳಿದ್ವಾ? | ರಮೇಶ್ ಜಾರಕಿಹೊಳಿ ವಿರುದ್ಧ ಕೃಷ್ಣಭೈರೇಗೌಡ ಆಕ್ರೋಶ - Mahanayaka

ಹೆಣ್ಣು ಮಕ್ಕಳ ಎದುರು ಬಟ್ಟೆ ಬಿಚ್ಚೋಕೆ ನಾವು ಹೇಳಿದ್ವಾ? | ರಮೇಶ್ ಜಾರಕಿಹೊಳಿ ವಿರುದ್ಧ ಕೃಷ್ಣಭೈರೇಗೌಡ ಆಕ್ರೋಶ

14/03/2021

ಶಿವಮೊಗ್ಗ:  ಇವರು ಪಾಪ ಅಂತೆ… ಮಾಡಬಾರದ್ದು ಮಾಡಿ ಅಂತ ನಾವು ಹೇಳಿದ್ವಾ? ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿಯನ್ನು ಲೇವಡಿ ಮಾಡಿದ್ದು, ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿದರು.

ನಗರದಲ್ಲಿ ಕಾಂಗ್ರೆಸ್ ಪಕ್ಷದಿಂದ ಏರ್ಪಡಿಸಲಾಗಿದ್ದ ಜನಾಕ್ರೋಶ ಸಮಾವೇಶದಲ್ಲಿ ಮಾತನಾಡಿದ ಕೃಷ್ಣಭೈರೇಗೌಡ ಬಿಜೆಪಿ ಹಾಗೂ ಬಿಜೆಪಿ ಮುಖಂಡರನ್ನು ತರಾಟೆಗೆತ್ತಿಕೊಂಡರು.  ಇದಲ್ಲದೇ ರಮೇಶ್ ಜಾರಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹೆಣ್ಣು ಮಕ್ಕಳ ಮುಂದೆ ಎಲ್ಲವನ್ನು ಬಿಚ್ಚೋಕೆ ನಾವು ಹೇಳಿದ್ವಾ? ಎಂದು ಅವರು ಪ್ರಶ್ನಿಸಿದರು.

ಇವರಿಗೆ ಅಧಿಕಾರ ನೀಡಿ ರಾಜ್ಯದ  ಹೆಣ್ಣುಮಕ್ಕಳ ಸ್ಥಿತಿ ಹೇಗಾಗಿದೆ ನೋಡಿ,  ನಾಡಿನ ಹೆಣ್ಣುಮಕ್ಕಳ ಸ್ಥಿತಿ ನೋಡಿ ಅಯ್ಯೋ ಪಾಪ ಎನ್ನಬೇಕೇ ಹೊರತು ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿಯನ್ನು ನೋಡಿ ಅಲ್ಲ ಎಂದು ಕೃಷ್ಣಭೈರೇಗೌಡ ಹೇಳಿದರು.

ಇತ್ತೀಚಿನ ಸುದ್ದಿ