ನೊಂದ ಮೊಗದಲ್ಲಿ ನಗು: ಪಾಕಿಸ್ತಾನದ ಜೈಲಿನಿಂದ ಭಾರತದ ಮೀನುಗಾರರು ರಿಲೀಸ್; ಕುಟುಂಬದ ಜತೆ ದೀಪಾವಳಿ ಆಚರಣೆ - Mahanayaka

ನೊಂದ ಮೊಗದಲ್ಲಿ ನಗು: ಪಾಕಿಸ್ತಾನದ ಜೈಲಿನಿಂದ ಭಾರತದ ಮೀನುಗಾರರು ರಿಲೀಸ್; ಕುಟುಂಬದ ಜತೆ ದೀಪಾವಳಿ ಆಚರಣೆ

13/11/2023


Provided by

ಪಾಕಿಸ್ತಾನದ ಕರಾಚಿ ಜೈಲಿನಿಂದ ಭಾರತದ 80 ಮೀನುಗಾರರು ದೀಪಾವಳಿ ಹಬ್ಬದಂದು ಬಿಡುಗಡೆಗೊಂಡಿದ್ದಾರೆ. ಬಂಧನಕ್ಕೊಳಗಾಗಿದ್ದ ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಅಧಿಕಾರಿಗಳು ಬಿಡುಗಡೆ ಮಾಡಿದ್ದು, ಮರುದಿನ ಪಂಜಾಬ್‌ನ ಅಟ್ಟಾರಿ-ವಾಘಾ ಗಡಿಯಲ್ಲಿ ರಾಜ್ಯದ ಮೀನುಗಾರಿಕೆ ಇಲಾಖೆಯ ತಂಡಕ್ಕೆ ಹಸ್ತಾಂತರಿಸಲಾಗಿದೆ. ಇಂದು ಗುಜರಾತ್‌ನ ವಡೋದರಾ ತಲುಪಿದ ಮೀನುಗಾರರು, ಅಲ್ಲಿಂದ ಅವರನ್ನುತಮ್ಮ ಕುಟುಂಬಗಳೊಂದಿಗೆ ಸೇರಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಡುಗಡೆಯಾದ 80 ಮೀನುಗಾರರ ಪೈಕಿ 59 ಮಂದಿ ಗಿರ್ ಸೋಮನಾಥ್ ಜಿಲ್ಲೆಯವರು. 15 ಮಂದಿ ದೇವಭೂಮಿ ದ್ವಾರಕಾದವರು, ಇಬ್ಬರು ಜಾಮ್‌ನಗರದವರಾಗಿದ್ದಾರೆ. ಒಬ್ಬರು ಅಮ್ರೇಲಿಯಿಂದ, ಎಲ್ಲರೂ ಗುಜರಾತ್‌ನಲ್ಲಿದ್ದರೆ, ಮೂವರು ಕೇಂದ್ರಾಡಳಿತ ಪ್ರದೇಶವಾದ ದಿಯುದವರಾಗಿದ್ದಾರೆ.

ಇತ್ತೀಚಿನ ಸುದ್ದಿ