ಬಿಜೆಪಿಯ 'ವಿಕಸಿತ್ ಭಾರತ್' ಅಭಿಯಾನದ ವಿರುದ್ಧ ಚುನಾವಣಾ ಆಯೋಗ ಗರಂ - Mahanayaka
8:42 AM Wednesday 20 - August 2025

ಬಿಜೆಪಿಯ ‘ವಿಕಸಿತ್ ಭಾರತ್’ ಅಭಿಯಾನದ ವಿರುದ್ಧ ಚುನಾವಣಾ ಆಯೋಗ ಗರಂ

21/03/2024


Provided by

ಅಪರೂಪದ ಬೆಳವಣಿಗೆಯೊಂದರಲ್ಲಿ ಚುನಾವಣಾ ಆಯೋಗವು ಬಿಜೆಪಿಯ ‘ವಿಕಸಿತ್ ಭಾರತ್’ ಅಭಿಯಾನದ ವಿರುದ್ಧ ಗರಂ ಆಗಿದೆ. ವಾಟ್ಸಪ್ ನಲ್ಲಿ ವಿಕಸಿತ್ ಭಾರತ ಸಂದೇಶವನ್ನು ಬಿಜೆಪಿ ಹರಡುತ್ತಿದ್ದು, ಇದನ್ನು ರವಾನಿಸುವುದನ್ನು ತಕ್ಷಣದಿಂದ ಸ್ಥಗಿತಗೊಳಿಸಬೇಕು ಎಂದು ಚುನಾವಣಾ ಆಯೋಗವು ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರ ಹೊರತಾಗಿಯೂ ಕೇಂದ್ರ ಸರಕಾರದ ವಿಕಸಿತ್ ಭಾರತ್ ಸಂಪರ್ಕ್ ಸಂದೇಶವು ಈಗಲೂ ಮೊಬೈಲ್ ಬಳಕೆದಾರರಿಗೆ ಬರುತ್ತಿದೆ ಎಂಬ ಹಲವಾರು ದೂರುಗಳನ್ನು ತಾನು ಸ್ವೀಕರಿಸಿರುವುದಾಗಿ ಚುನಾವಣಾ ಆಯೋಗ ಹೇಳಿದೆ.ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ,

ವ್ಯವಸ್ಥೆಯಲ್ಲಿನ ವಿಳಂಬ ಹಾಗೂ ಅಂತರ್ ಜಾಲದ ಮಿತಿಯಿಂದಾಗಿ ಬಹುಶ ಕೆಲವು ಸಂದೇಶಗಳು ತಡವಾಗಿ ಈಗ ಬಳಕೆದಾರರಿಗೆ ತಲುಪುತ್ತಿರಬಹುದು ಎಂದು ಹೇಳಿದೆ. ಮಾತ್ರ ಅಲ್ಲ ಚುನಾವಣಾ ನೀತಿ ಸಂಹಿತೆ ಜಾರಿ ಆಗುವುದಕ್ಕೂ ಮುನ್ನವೇ ಈ ಸಂದೇಶಗಳನ್ನು ನಾವು ರವಾನಿಸಿದ್ದೇವೆ ಎಂದು ಅದು ಸಮರ್ಥಿಸಿಕೊಂಡಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ