ಆನೆ - ಮಾನವ ಸಂಘರ್ಷ ತಡೆ ಸಿಎಂ ಸಿದ್ದರಾಮಯ್ಯ ಹೊಸ ಪ್ಲಾನ್ - Mahanayaka
3:14 AM Thursday 18 - September 2025

ಆನೆ — ಮಾನವ ಸಂಘರ್ಷ ತಡೆ ಸಿಎಂ ಸಿದ್ದರಾಮಯ್ಯ ಹೊಸ ಪ್ಲಾನ್

elephant
13/08/2024

ಬೆಂಗಳೂರು: ಆನೆ — ಮಾನವ ಸಂಘರ್ಷ ತಡೆಯಲು ಸಿಎಂ ಸಿದ್ದರಾಮಯ್ಯ ಹೊಸ ಯೋಜನೆಯನ್ನು ಘೋಷಿಸಿದ್ದು,  8 ವಿಶೇಷ ಗಜ ಕಾರ್ಯಪಡೆ ಸ್ಥಾಪಿಸಲಾಗಿದೆ.

ಕರ್ನಾಟಕ ಅರಣ್ಯ ಸಾಮರಸ್ಯ ಯೋಜನೆಯು ಅರಣ್ಯ ಪ್ರದೇಶಗಳಲ್ಲಿ ಶೂನ್ಯ ಮಾನವ — ಪ್ರಾಣಿ ಸಂಘರ್ಷ ವಲಯಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.

ಜನ ವಸತಿ ಪ್ರದೇಶಗಳಿಗೆ ಕಾಡು ಪ್ರಾಣಿಗಳು ದಾರಿ ತಪ್ಪಿ ಬರುವಿಕೆಯನ್ನು ತಪ್ಪಿಸಲು, ಹುಲ್ಲುಗಾವಲು ಅಭಿವೃದ್ಧಿ, ಬಿದಿರಿನ ಪುನರುತ್ಪಾದನೆ ಮತ್ತು ಸೌರ ನೀರಿನ ಪಂಪ್‌ ಸೌಲಭ್ಯಗಳೊಂದಿಗೆ ನೀರು ಗುಂಡಿ ನಿರ್ಮಾಣದಂತಹ ಆವಾಸಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ