ರಮಝಾನ್ ತಿಂಗಳು ಕೊನೆಯ ಹತ್ತಕ್ಕೆ ಪ್ರವೇಶ: ಮಸ್ಜಿದುಲ್ ಹರಾಮ್ & ಮಸ್ಜಿದುನ್ನವವಿಯಲ್ಲಿ ವಿಶೇಷ ಪ್ರಾರ್ಥನೆಗೆ ಸಿದ್ದತೆ - Mahanayaka

ರಮಝಾನ್ ತಿಂಗಳು ಕೊನೆಯ ಹತ್ತಕ್ಕೆ ಪ್ರವೇಶ: ಮಸ್ಜಿದುಲ್ ಹರಾಮ್ & ಮಸ್ಜಿದುನ್ನವವಿಯಲ್ಲಿ ವಿಶೇಷ ಪ್ರಾರ್ಥನೆಗೆ ಸಿದ್ದತೆ

20/03/2025

ರಮಝಾನ್ ತಿಂಗಳು ಕೊನೆಯ ಹತ್ತಕ್ಕೆ ಪ್ರವೇಶಿಸುತ್ತಿರುವಂತೆಯೇ ವಿಶೇಷ ರಾತ್ರಿಯನ್ನು ನಿರೀಕ್ಷಿಸುತ್ತಾ ಜಾಗರಣೆ ನಡೆಸುವುದಕ್ಕೆ ವಿಶ್ವಾಸಿಗಳು ಸಜ್ಜಾಗಿದ್ದಾರೆ. ಕೊನೆಯ ಹತ್ತರಲ್ಲಿ ಮಸ್ಜಿದುಲ್ ಹರಾಮ್ ಮತ್ತು ಮಸ್ಜಿದುನ್ನವವಿಯಲ್ಲಿ ವಿಶೇಷ ರಾತ್ರಿ ನಮಾಜ್ ಗಳು ನಡೆಯುತ್ತವೆ. ಇದಕ್ಕಾಗಿ ವಿಶ್ವಾಸಿಗಳನ್ನು ಸ್ವೀಕರಿಸುವುದಕ್ಕೆ ಎರಡೂ ಹರಂಗಳು ಸಿದ್ಧವಾಗಿವೆ.


Provided by

ಪ್ರವಾದಿ ಮುಹಮ್ಮದ್ ರಿಗೆ ಕುರ್ ಆನ್ ಅವತೀರ್ಣಗೊಂಡ ರಾತ್ರಿ ಲೈಲತುಲ್ ಕದ್ರ್ ಎಂದು ಹೇಳಲಾಗಿದೆ. ರಂಝಾನಿನ ಕೊನೆಯ 10 ದಿನಗಳಲ್ಲಿ ಬೆಸ ದಿನದಂದು ಈ ಲೈಲತುಲ್ ಕದ್ರ್ ಬರುತ್ತದೆ. ಅಂದರೆ 21, 23, 25, 27 ರ ಯಾವುದಾದರೂ ಒಂದು ದಿನ ಪವಿತ್ರ ಕುರಾನ್ ಅವತೀರ್ಣವಾಗಿದೆ ಎಂಬುದು ಮುಸ್ಲಿಮರ ನಂಬಿಕೆ. ಈ ರಾತ್ರಿಯಂದು ಪ್ರತಿಯೊಂದು ಒಳಿತಿಗೆ ಸಾವಿರಕ್ಕಿಂತಲೂ ಅಧಿಕ ಪ್ರತಿಫಲ ಲಭಿಸುತ್ತದೆ ಎಂಬ ವಿಶ್ವಾಸ ಮುಸ್ಲಿಮರದು . ಇದನ್ನು ನಿರೀಕ್ಷಿಸಿ ಮುಸ್ಲಿಮರು ಈ ರಾತ್ರಿಗಳಂದು ವಿಶೇಷ ಪ್ರಾರ್ಥನೆ ನಡೆಸುತ್ತಾರೆ . ಪುಣ್ಯವನ್ನು ನಿರೀಕ್ಷಿಸಿ ಈ ರಾತ್ರಿಗಳಂದು ಮುಸ್ಲಿಮರು ಮಕ್ಕಾದ ಮಸ್ಕಿದುಲ್ ಹರಾಮ್ ಮತ್ತು ಮದೀನಾದ ಮಸ್ಜಿದುನ್ನಬವಿಗೆ ಧಾವಿಸುತ್ತಾರೆ. ಆದ್ದರಿಂದ ಇದಕ್ಕೆ ಬೇಕಾದ ಸೌಲಭ್ಯವನ್ನು ಒದಗಿಸುವ ಎಲ್ಲಾ ಸಿದ್ಧತೆಗಳು ಮುಗಿದಿವೆ ಎಂದು ತಿಳಿದುಬಂದಿದೆ.

ಸೌದಿಯ ಪ್ರಮುಖ ವಿದ್ವಾಂಸರ ನೇತೃತ್ವದಲ್ಲಿ ನಡೆಯುವ ದೀರ್ಘ ರಾತ್ರಿ ನಮಾಜ್ಗೆ ಲಕ್ಷಾಂತರ ಮಂದಿ ಸೇರುತ್ತಾರೆ . ದೇವನಲ್ಲಿ ಪ್ರಾರ್ಥಿಸುತ್ತಾ ಕೆಡುಕಿನಿಂದ ಮುಕ್ತವಾಗುವ ಪ್ರತಿಜ್ಞೆ ಮಾಡುತ್ತಾ ಮುಸ್ಲಿಮರು ಈ ರಾತ್ರಿಯನ್ನು ಕಳೆಯುತ್ತಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ